‘ಸ್ವಾಮೀಜಿ ಹೇಳಿಕೆಗೆ ಮನಸ್ಸು ಘಾಸಿಗೊಂಡಿದೆ’

Kannada News

07-11-2017

ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದ ಲಿಂಗಾಯಿತ ಪ್ರತ್ಯೇಕ ಧರ್ಮ ಕುರಿತ ಹೋರಾಟ ಸಮಾವೇಶದಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಸಮುದಾಯದ ಹಿರಿಯ ಮುಖಂಡ ಹಾಗೂ ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬಸವರಾಜ ಸ್ವಾಮೀಜಿ ನೀಡಿರುವ ಹೇಳಿಕೆ ಸರಿಯಲ್ಲ. ಅವರು ಆಡಿದ ಆಡಿದ ಮಾತು ನಮ್ಮ ಸಂತೋಷವನ್ನು ಕದಡಿದ್ದು ಸುಳ್ಳಲ್ಲ. ವೀರಶೈವ ಲಿಂಗಾಯತ ಒಂದೇ ಎಂದು ಹೇಳುವುದು ಅಪಾಹಾಸ್ಯದ ಸಂಗತಿಯಾದರೂ, ನಾವು ವೀರಶೈವರ ಕುರಿತು ಭಿನ್ನತೆ ಹೊಂದಿರುವುದಿಲ್ಲ. ನೀವು ನಮ್ಮೊಡನೆ ಬನ್ನಿ ಎಂದು ಹೃದಯ ವೈಶಾಲ್ಯೆತೆಯಿಂದ ಆಮಂತ್ರಿಸಿದ್ದೇವೆ. ಇಂತಹ ಸಂದರ್ಭದಲ್ಲಿ ಸ್ವಾಮೀಜಿ ಹೇಳಿಕೆ ಸರಿಯಲ್ಲ ಎಂದರು.

ನಮ್ಮದು ಸಾಮರಸ್ಯದ, ಸಂಪ್ರೀತಿಯ ನಡೆಯಾಗಿದೆ. ಇಂತಹ ಸನ್ನಿವೇಶದಲ್ಲಿ ಜಯ ಮೃತ್ಯುಂಜಯ ಸ್ವಾಮಿಗಳು ಜನ ಸಾಗರವನ್ನು ಕಂಡ ಉತ್ಸಾಹದಲ್ಲಿ ತಮ್ಮ ಅನಿಸಿಕೆಗಳನ್ನು ಹೇಳುವ ರೀತಿಯಲ್ಲಿ ಎಡವಿದ್ದಾರೆ. ಲಿಂಗಾಯತ ಧರ್ಮಕ್ಕೆ ಬಸವಣ್ಣನೊಬ್ಬನೆ ಗುರು ಹಾಗೂ ತಂದೆ, ವೀರಶೈವರಿಗೆ ಐದು ಪಂಚಪೀಠಗಳು ಗುರುಗಳಾಗಿದ್ದಾರೆ ಎಂದು ಹೇಳಬೇಕಾದ್ದನ್ನು ಉತ್ಸಾಹದ ಬರದಲ್ಲಿ ತಪ್ಪು ಅರ್ಥ ಬರುವ ರೀತಿಯಲ್ಲಿ ಹೇಳಿದ್ದು ಅಸಮಂಜಸ. ಅವರು ಈ ರೀತಿ ಹೇಳಿದ, ನೀಡಿದ ಹೇಳಿಕೆ ನನ್ನ ಮನಸ್ಸಿಗೆ ಅತೀವ ನೋವನ್ನುಂಟು ಮಾಡಿದೆ ಎಂದಿದ್ದಾರೆ.

ಸ್ವಾಮೀಜಿ ಹೇಳಿಕೆಯಿಂದ ನನ್ನ ಮನಸ್ಸು ಘಾಸಿಗೊಂಡಿದೆ. ವೀರಶೈವರ ಮನಸ್ಸಿಗಾದ ನೋವಿನಿಂದ ವಿಚಲಿತನಾಗಿದ್ದೇನೆ. ಏಕೆಂದರೆ ಜನ ಸಾಗರದಲ್ಲಿ ನಮ್ಮ ನಡೆಯನ್ನು ಮೆಚ್ಚಿ ಸಮಾವೇಶದಲ್ಲಿ ವೀರಶೈವರೆಂದು ಗುರುತಿಸಿಕೊಂಡ ಅನೇಕರು ಭಾಗವಹಿಸಿದ್ದು, ಅವರ ಮನಸ್ಸಿಗೂ ನೋವಾಗಿದೆ. ನಾನು ನನ್ನ ಹೃದಯಾಂತರಾಳದಿಂದ, ಪ್ರಾಂಜಲ ಮನಸ್ಸಿನಿಂದ ಈ ಘಟನೆ ಕುರಿತು ವಿಷಾದ ವ್ಯಕ್ತಪಡಿಸುತ್ತಿದ್ದೇನೆ. ಸಹೃದಯರಾದ ವೀರಶೈವ ಭಕ್ತರು ಇದನ್ನು ಕ್ಷಮತಾ ಭಾವನೆಯಿಂದ ಸ್ವೀಕರಿಸುವದರೊಂದಿಗೆ ಆದ ಕಹಿ ಘಟನೆಯನ್ನು ಮರೆಯಬೇಕೆಂದು ಅತ್ಯಂತ ನಮ್ರತಾ ಭಾವದಿಂದ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

Kannada News Karnataka ಬಸವರಾಜ ಹೊರಟ್ಟಿ ಪಂಚಪೀಠ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ