ಬೆತ್ತಲೆ ರೆಸ್ಟೋರೆಂಟ್….

Kannada News

06-11-2017

ಫ್ರಾನ್ಸ್ ದೇಶದ ರಾಜಧಾನಿ ಪ್ಯಾರಿಸ್ ಜಗತ್ತಿನ ಫ್ಯಾಷನ್ ರಾಜಧಾನಿ ಎಂದೇ ಹೆಸರಾಗಿದೆ. ಫ್ರಾನ್ಸ್ ದೇಶದ ಜನರು, ತಮ್ಮ ಫ್ರೆಂಡ್ಲಿ ಮತ್ತು ಕೂಲ್ ಆದ ವರ್ತನೆಗೆ ಹೆಸರಾಗಿದ್ದಾರೆ. ಪ್ಯಾರಿಸ್ ನಲ್ಲಿನ  ಐಫೆಲ್ ಗೋಪುರ ಹೇಗೆ ಪ್ರಸಿದ್ಧವೋ ಅಲ್ಲಿಯ ನ್ಯೂಡಿಸ್ಟ್ ಬೀಚ್‌ಗಳು ಅಂದರೆ, ಮೈಮೇಲೆ ಕಿಂಚಿತ್ತೂ ಬಟ್ಟೆಯ ಹಂಗಿಲ್ಲದೆ ವಿಹರಿಸಬಹುದಾದ ಬೆತ್ತಲೆ ಕಡಲ ತೀರಗಳೂ ಕೂಡ ಹೆಸರುವಾಸಿ.

ಇದೀಗ ಪ್ಯಾರಿಸ್‌ ನಲ್ಲಿ ದೇಶದ ಮೊದಲ ಬೆತ್ತಲೆ ರೆಸ್ಟೋರೆಂಟ್ ಆರಂಭವಾಗಿದೆ. ತನ್ನ ಅಭಿರುಚಿಗೆ ತಕ್ಕಂತೆ ಒ’ ನ್ಯಾಚುರಲ್ ಎಂಬ ಹೆಸರಿಟ್ಟುಕೊಂಡಿರುವ ಈ ರೆಸ್ಟೋರೆಂಟ್‌ ನಲ್ಲಿ ‘ಹುಟ್ಟು ಉಡುಗೆ’ ತೊಟ್ಟವರಷ್ಟೇ ಊಟ ಮಾಡಬಹುದು.

ಹೆಂಗಸರಾಗಲಿ ಗಂಡಸರಾಗಲಿ, ಈ ರೆಸ್ಟೋರೆಂಟ್ ಪ್ರವೇಶಿಸುತ್ತಿದ್ದಂತೆ ತಮ್ಮ ಒಳಉಡುಪೂ ಸೇರಿದಂತೆ ಪೂರ್ತಿಯಾಗಿ ಎಲ್ಲಾ ಬಟ್ಟೆ ಬಿಚ್ಚಿ ಅಲ್ಲಿರುವ ವಾರ್ಡ್ ರೋಬ್‌ ನಲ್ಲಿಡಬೇಕು, ಆನಂತರವೇ ಟೇಬಲ್ ಬಳಿ ಕುಳಿತುಕೊಳ್ಳಲು ಅವಕಾಶ. ಚಿಂತಿಸಬೇಡಿ, ಆ ಹೋಟೆಲಿನ ಸರ್ವರ್‌ ಗಳೂ ಕೂಡ ಬೆತ್ತಲಾಗಿಯೇ ಇರುತ್ತಾರೆ, ಬೆತ್ತಲಾಗಿಯೇ ತಿಂಡಿ ತೀರ್ಥ ತಂದುಕೊಡುತ್ತಾರೆ.

ಇಂಥ ಒಂದು ಬೆತ್ತಲೆ ರೆಸ್ಟೋರೆಂಟ್ ನಲ್ಲಿ ಊಟ ತಿಂಡಿ ತುಂಬಾ ದುಬಾರಿಯಾಗಿರಬೇಕು ಅಂದುಕೊಂಡ್ರಾ? ಹಾಗೇನೂ ಇಲ್ಲ, 30 ಯೂರೋಗಳು ಅಂದರೆ ಸುಮಾರು ಎರಡುಸಾವಿರ ರೂಪಾಯಿಗಳಿಗೆ ಇಲ್ಲಿ ನೀವು ಊಟ ಮಾಡಬಹುದು.

ಓ ನಾವಂತೂ ಈ ಹೋಟೆಲಿನ ಒಳಗೆ ಹೋಗಲ್ಲ, ಆದರೆ ಈಚೆಯಿಂದ ಒಂದಿಷ್ಟು ನೋಡಿಕೊಳ್ಳುತ್ತೇವೆ ಎಂಬ ಆಸೆಯಿರುವವರಿಗೆ ಇಲ್ಲಿ ಅವಕಾಶವಿಲ್ಲ. ದಾರಿಯಲ್ಲಿ ಹೋಗುವವರು ಬರುವವರು ಯಾರೂ ಕೂಡ ಈ ರೆಸ್ಟೋರೆಂಟಿನ ಒಳಗಿರುವವರನ್ನು ಇಣುಕಿ ನೋಡಲು ಸಾಧ್ಯವಿಲ್ಲದಂತೆ ವ್ಯವಸ್ಥೆ ಮಾಡಲಾಗಿದೆ. ಒಟ್ಟಿನಲ್ಲಿ, ಇಂಥದ್ದೆಲ್ಲವನ್ನೂ ನೋಡಿದಾಗ ಈ ಜಗತ್ತು ವಿಚಿತ್ರಗಳ ಒಂದು ಸಂತೆ ಅನ್ನುವ ಮಾತು ನೆನಪಾಗುತ್ತದೆ.

 


ಸಂಬಂಧಿತ ಟ್ಯಾಗ್ಗಳು

Kannada News Karnataka ಫ್ರಾನ್ಸ್ ಪ್ಯಾರಿಸ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ