ಗಾಂಜಾ ಮಾರುತ್ತಿದ್ದ ಐವರ ಬಂಧನ

Kannada News

06-11-2017

ಬೆಂಗಳೂರು: ಪುಲಕೇಶಿನಗರ, ರಾಮಮೂರ್ತಿನಗರ ಕೆ.ಆರ್.ಪುರಂ ನ ಗಾಂಜಾ ಮಾರಾಟ ಮಾಡುತ್ತಿದ್ದ ಕೇಂದ್ರಗಳ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿರುವ ಸಿಸಿಬಿ ಪೊಲೀಸರು, ಐವರನ್ನು ಬಂಧಿಸಿ 4 ಕೆ.ಜಿ. 450 ಗ್ರಾಂ.ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಪುಲಕೇಶಿನಗರದ ಸಿಂದಿ ಸರ್ಕಲ್‍ನ ಜಿಮ್‍ಖಾನಾ ಕ್ಲಬ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಕಮ್ಮನಹಳ್ಳೀಯ ಶೇಖ್ ಸುಬಾನ್ (35) ಎಂಬಾತನನ್ನು ಬಂಧಿಸಿ 25 ಸಾವಿರ ರೂ. ಮೌಲ್ಯದ 1 ಕೆಜಿ 150 ಗ್ರಾಮ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಮತ್ತು ಕೆ.ಆರ್.ಪುರಂ ಹಳೆ ಮದ್ರಾಸ್ ರಸ್ತೆಯ ಐಟಿಐ ಬಸ್ ನಿಲ್ದಾಣದ ಬಳಿ ಗಾಂಜಾ ಮಾರುತ್ತಿದ್ದ ಜಾಫರ್ (21) ಎಂಬಾತನನ್ನು ಬಂಧಿಸಿ 50 ಸಾವಿರ ರೂ. ಮೌಲ್ಯದ 1 ಕೆ.ಜಿ. 100 ಗ್ರಾಂ ಗಾಂಜಾ, ನಗದು ಹಾಗೂ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ಇದಲ್ಲದೆ ಮೇಡಹಳ್ಳಿಯ ರಾಯಲ್ ರೆಸಿಡೆನ್ಸಿ ಬಳಿ, ಗಾಂಜಾ ಮಾರುತ್ತಿದ್ದ ಹೊಸಕೋಟೆಯ ಸಯ್ಯದ್ ಸರ್ತಾಜ್ (21) ಎಂಬಾತನನ್ನು ಬಂಧಿಸಿ 60 ಸಾವಿರ ರೂ. ಮೌಲ್ಯದ 1 ಕೆ.ಜಿ ಗಾಂಜಾ ಹಾಗೂ ಮೊಬೈಲ್, ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ರಾಮಮೂರ್ತಿನಗರದ ಹೊರಮಾವು ಮುಖ್ಯರಸ್ತೆಯಲ್ಲಿ ಗಾಂಜಾ ಮಾರುತ್ತಿದ್ದ ಟಿ.ಸಿ.ಪಾಳ್ಯದ ಮುಕುಂದ ರಾಜು (30) ನನ್ನು ಬಂಧಿಸಿ 1ಕೆಜಿ.100 ಗ್ರಾಂ ಗಾಂಜಾ, ಮೊಬೈಲ್ ವಶಪಡಿಸಿಕೊಳ್ಳಲಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿ, ಪರಾರಿಯಾಗಿರುವ ಒರಿಸ್ಸಾ ಮೂಲದ ಅಜಯ್‍ಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ತಿಳಿಸಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

Kannada News Karnataka ಸಿಸಿಬಿ ಪೊಲೀಸ್ ಗಾಂಜಾ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ