ಟಾಟಾ ಏಸ್- ಆಮ್ನಿ ನಡುವೆ ಡಿಕ್ಕಿ

Kannada News

06-11-2017

ಮೈಸೂರು: ಟಾಟಾ ಏಸ್ ಮತ್ತು ಓಮಿನಿ ಕಾರುಗಳ ನಡುವಿನ ಭೀಕರ ರಸ್ತೆ ದುರಂತದಲ್ಲಿ ಒರ್ವ ಮಹಿಳೆ ಮತ್ತು ಇಬ್ಬರು ಪುರುಷರಿಗೆ ತೀವ್ರಗಾಯಗಳಾಗಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ. ಘಟನೆಯು ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ, ಟಿ.ನರಸೀಪುರ ತಾಲ್ಲೂಕಿನ ಚನ್ನಬಸಯ್ಯನ ಹುಂಡಿ ಗೇಟ್ ಬಳಿ ಈ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಬಳ್ಳಾರಿ ಮೂಲದಿಂದ ಕಬ್ಬು ಕಟಾವಿಗೆ ಬಂದಿದ್ದ ಕೂಲಿಯಾಳುಗಳೆಂದು ಗುರುತಿಸಲಾಗಿದೆ. ಅಪಘಾತದ ಭೀಕರತೆಗೆ ವ್ಯಕ್ತಿಯೊಬ್ಬರ ಕಾಲು ಮುರಿದಿದೆ. ಗಾಯಾಳುಗಳನ್ನು ಟಿ.ನರಸೀಪುರ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ಟಾಟಾ ಏಸ್ ಅಪಘಾತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ