ಹೆಂಗೆಲ್ಲಾ ಮೋಸ ಮಾಡ್ತಾರೆ ನೋಡಿ...

Kannada News

06-11-2017 405

ಬೆಂಗಳೂರು: ಏರ್ ಟೆಲ್ ಕಂಪೆನಿಯಲ್ಲಿ ಟ್ರಾವೆಲ್ ಮ್ಯಾನೇಜರ್ ಕೆಲಸ ಕೊಡಿಸುವುದಾಗಿ ನಿರುದ್ಯೋಗಿ ಯುವಕನೊಬ್ಬನನ್ನು ನಂಬಿಸಿ 7ಲಕ್ಷಕ್ಕೂ ಹೆಚ್ಚಿನ ಹಣ ವಂಚನೆ ನಡೆಸಿ, ಪರಾರಿಯಾಗಿರುವ ವಂಚಕನಿಗಾಗಿ ಸಿಐಡಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.

ಏರ್ ಟೆಲ್ ಕಂಪೆನಿಯಲ್ಲಿ ಟ್ರಾವೆಲ್ ಮ್ಯಾನೇಜರ್ ಕೆಲಸಕೊಡಿಸುವುದಾಗಿ ಪ್ರೀತಿ, ಕೀರ್ತಿ, ರಾಧಿಕಾ ಎನ್ನುವ ಯುವತಿಯರ ಹೆಸರಿನಲ್ಲಿ ಮೊಬೈಲ್ ಕರೆ ಮಾಡಿಸಿ ನಂಬಿಸಿದ ವಂಚಕ ಡಾಕ್ಯುಮೆಂಟ್ ವೇರಿಫಿಕೇಶನ್ ಫೀಸ್, ಜಾಬ್ ಕನ್ಫರ್ಮೇಶನ್, ಐಡಿ ಆಕ್ಟಿವೇಶನ್, ಕನ್ಸಲ್ಟನ್ಸಿ ಸರ್ವಿಸ್ ಫೀಸ್, ಅಥಾರಿಟಿ ಸಿಗ್ನೇಚರ್, ಜಿಎಸ್‍ಟಿ ಚಾರ್ಜಸ್ ಸೇರಿ 7,19,360 ರೂ. ವಂಚನೆ ಮಾಡಿದ್ದಾನೆ.

ಕಳೆದ ಅಕ್ಟೋಬರ್ 9 ರಂದು ಮೊಬೈಲ್ ಕರೆ ಮಾಡಿಸಿ ನಾಳೆ ಸಂದರ್ಶನವಿದೆ ಎಂದು ಹಣವನ್ನು ಬ್ಯಾಂಕ್ ಖಾತೆಗೆ ಹಾಕಿಸಿಕೊಂಡು ವಂಚಿಸಲಾಗಿದ್ದು, ಮರುದಿನ ಯಾವುದೇ ಸಂದರ್ಶನ ನಡೆಯದಿದ್ದರಿಂದ, ಆತಂಕಗೊಂಡು ಪರಶೀಲನೆ ನಡೆಸಿದ ಯುವಕನಿಗೆ ತಾವು ಹಾಕಿದ ಹಣ ಅನಿಲ್ ಕುಮಾರ್ ರಾಯ್ ಎಂಬುವರ ಹೆಸರಿನ ಅಕೌಂಟ್‍ಗೆ ಹಣ ಜಮಾ ಆಗಿರುವುದು ಕಂಡುಬಂದಿದೆ. ಈ ಬಗ್ಗೆ ವಂಚನೆಗೊಳಗಾದ ಯುವಕ ಸಿಐಡಿ ಪೊಲೀಸರಿಗೆ ದೂರು ನೀಡಿ, ಕರೆ ಮಾಡಿದ ಮೊಬೈಲ್ ನಂಬರ್‍ ಗಳು, ಬ್ಯಾಂಕ್ ಖಾತೆಯ ವಿವರಗಳು ಇನ್ನಿತರ ಮಾಹಿತಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಸಿಐಡಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಸಂಬಂಧಿತ ಟ್ಯಾಗ್ಗಳು

Kannada News Karnataka ಮ್ಯಾನೇಜರ್ ಜಿಎಸ್‍ಟಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ