ಎಟಿಎಂ ನಿಂದ ಬಂದ ಹಣ ಹರಿದಿತ್ತು...

Kannada News

06-11-2017

ಮೈಸೂರು: ಎಟಿಎಂನಲ್ಲಿ ಹಣ ತೆಗೆಯುವಾಗ ಗರಿ ಗರಿ ನೋಟು ಬರುತ್ತವೆ. ಆದರೆ ಮೈಸೂರಿನ ಕೆ.ಆರ್.ನಗರದ ಎಸ್‍ಬಿಐ ಬ್ಯಾಂಕ್‍ನ ಎಟಿಎಂನಿಂದ ಕಾನ್‍ಸ್ಟೇಬಲ್ ಒಬ್ಬರು ಹಣ ತೆಗೆದಾಗ, ಎರಡು ಸಾವಿರ ಮುಖಬೆಲೆಯ ಹರಿದ ನೋಟುಗಳು ಬಂದಿದೆ. ಒಂದಲ್ಲ, ಎರಡಲ್ಲ 24 ಸಾವಿರ ರೂ. ಹರಿದ ನೋಟುಗಳು ಎಟಿಎಂನಿಂದ ಬಂದಿರುವುದು ಕಂಡು ಕಾನ್‍ಸ್ಟೇಬಲ್ ಕಂಗಾಲಾಗಿದ್ದಾರೆ.

ನಗರದ ದೇವರಾಜಠಾಣೆಯ ಕಾನ್‍ಸ್ಟೇಬಲ್ ಉಮೇಶ್ ಎಂಬುವರು ನಿನ್ನೆ 25 ಸಾವಿರ ರೂ. ತೆಗೆಯಲು ಕೆ.ಆರ್.ನಗರದ ಎಸ್‍ಬಿಐನ ಎಟಿಎಂನಿಂದ ಹಣ ಡ್ರಾಮಾಡಿದ್ದಾರೆ, ಈ ಪೈಕಿ ಎರಡು ಸಾವಿರ ಮುಖಬೆಲೆಯ 24 ಸಾವಿರ ರೂ. ನೋಟುಗಳು ಹರಿದಿವೆ ಮತ್ತು ಬಣ್ಣ ಮಾಸಿದೆ ಎಂದು ತಿಳಿದು ಬಂದಿದೆ.

 

 


ಸಂಬಂಧಿತ ಟ್ಯಾಗ್ಗಳು

Kannada News Karnataka ಕಾನ್‍ಸ್ಟೇಬಲ್ ಎಟಿಎಂ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ