ಸರಗಳ್ಳರಿಗೆ ಧರ್ಮದೇಟು.. 

Kannada News

06-11-2017

ಬೆಂಗಳೂರು: ನಗರದ ಹೊರವಲಯದ ತ್ಯಾಮಗೊಂಡ್ಲುವಿನ ತೋಟನಹಳ್ಳಿ ಬಳಿ ಮಹಿಳೆಯೊಬ್ಬರ ಚಿನ್ನದ ಸರ ಕಸಿದು ಪರಾರಿಯಾಗುತ್ತಿದ್ದ ಇಬ್ಬರು ಸರಗಳ್ಳರನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೊಪ್ಪಿಸಿರುವ ಘಟನೆ ನಡೆದಿದೆ.

ನೆಲಮಂಗಲದ ಹೇಮಂತ್ ಹಾಗೂ ವಿನಯ್ ಎಂದು ಬಂಧಿತ ಆರೋಪಿಗಳನ್ನು ಗುರುತಿಸಲಾಗಿದೆ. ದ್ವಿಚಕ್ರ ವಾಹನದಲ್ಲಿ ಬಂದಿದ್ದ ಈ ಇಬ್ಬರು ಕಳ್ಳರು, ತೋಟನಹಳ್ಳಿ ಬಳಿ ಮಂಜುಳಾ ಎಂಬುವರಿಗೆ ಚಾಕು ತೋರಿಸಿ ಅವರ ಕತ್ತಿನಲ್ಲಿದ್ದ ಸರ ಕಸಿದು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಸರ ಗಟ್ಟಿಯಾಗಿ ಹಿಡಿದುಕೊಂಡ ಮಂಜುಳಾ ರಕ್ಷಣೆಗಾಗಿ ಕೂಗಿಕೊಂಡಿದ್ದು, ಹತ್ತಿರದಲ್ಲಿದ್ದ ಸ್ಥಳೀಯರು ಓಡಿ ಬಂದು ಕಳ್ಳರನ್ನು ಬೆನ್ನಟ್ಟಿ ಧರ್ಮದೇಟು ಕೊಟ್ಟು ತ್ಯಾಮಗೊಂಡ್ಲು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಕಳ್ಳರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ