ಅಂಗಡಿ ಬೀಗ ಕತ್ತರಿಸಿ ಕಳ್ಳತನ..

Kannada News

06-11-2017

ಮಂಡ್ಯ: ಮಂಡ್ಯದ ಕೆ.ಆರ್.ಪೇಟೆಯಲ್ಲಿ ಮತ್ತೊಂದು ಕಳ್ಳತನ ನಡೆದಿದೆ. ನಿನ್ನೆ ರಾತ್ರಿ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದು, ಪಟ್ಟಣದ ಎಪಿಎಂಸಿ ಆವರಣದಲ್ಲಿನ ಅಂಗಡಿಯಲ್ಲಿ ಕಳ್ಳತನ ನಡೆಸಿದ್ದಾರೆ. ಎಪಿಎಂಸಿ ಯಲ್ಲಿರುವ ಮಹಮದ್ ರಫಿ ಎಂಬುವವರಿಗೆ ಸೇರಿರುವ ಅಂಗಡಿಯ ಬೀಗವನ್ನು ಕತ್ತರಿಸಿ, 52 ಸಾವಿರ ನಗದು ಸೇರದಂತೆ, ಅಂಗಡಿಯಲ್ಲಿನ ಬೆಲೆಬಾಳುವ ವಸ್ತುಗಳನ್ನು ಲಪಟಾಯಿಸಿದ್ದಾರೆ. ನಿನ್ನೆ ವ್ಯಾಪಾರ ಮುಗಿಸಿಕೊಂಡು ಅಂಗಡಿಗಳಿಗೆ ಬೀಗ ಹಾಕಿ ತೆರಳಿದ್ದಾರೆ. ಇನ್ನು ಎಂದಿನಂತೆ, ಬೆಳಿಗ್ಗೆ ತನ್ನ ಮಳಿಗೆಯ ಹತ್ತಿರ ಬಂದಾಗ ಕಳ್ಳನ ನಡೆದಿರುವುದು ಬೆಳಕಿಗೆ ಬಂದಿದೆ. ಕೂಡಲೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದು, ಕಳ್ಳರಿಗಾಗಿ ಬಲೆ ಬೀಸಿದ್ದಾರೆ.  


ಸಂಬಂಧಿತ ಟ್ಯಾಗ್ಗಳು

Kannada News Karnataka ಕೆ.ಆರ್.ಪೇಟೆ ಎಪಿಎಂಸಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ