ಇದೆಂಥಾ ಹುಚ್ಚು...

Kannada News

06-11-2017

ಬೆಂಗಳೂರು: ಪ್ರೀತಿಸಿ ಸಹಜೀವನ ನಡೆಸುತ್ತಿದ್ದ (ಲಿವಿಂಗ್ ರಿಲೇಷನ್‍ಶಿಪ್)ಖಾಸಗಿ ಕಾಲೇಜೊಂದರ 40 ವರ್ಷ ವಯಸ್ಸಿನ ಪ್ರಿನ್ಸಿಪಾಲ್, ಕೈಕೊಟ್ಟಿದ್ದರಿಂದ ನೊಂದ 21ರ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜೆ.ಪಿ. ನಗರದಲ್ಲಿ ನಡೆದಿದೆ. ಮಾನಸಿಕ ಖಿನ್ನತೆಗೊಳಗಾಗಿ ನಾಲ್ಕೈದು ಬಾರಿ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ತರುಣ್‍ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಎಸ್‍ಎಸ್‍ಎಲ್‍ಸಿ ಫೇಲಾಗಿರುವ ತರುಣ್ ಜೆ.ಪಿ. ನಗರದ ಖಾಸಗಿ ಸ್ಕೂಲ್‍ನಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸಕ್ಕೆ ಸೇರಿದ್ದ. ನಂತರ ಆ ಶಾಲೆಯ ಪ್ರಿನ್ಸಿಪಾಲ್ ಜೊತೆ ಲವ್ವಿ ಡವ್ವಿ ಶುರುವಾಗಿದೆ. ಕಳೆದ ಒಂದು ವರ್ಷದಿಂದ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಅಷ್ಟೇ ಅಲ್ಲದೇ ಇಬ್ಬರೂ ಕೂಡ ನಾಲ್ಕು ತಿಂಗಳಿಂದ ಲಿವಿಂಗ್ ರಿಲೇಷನ್‍ಶಿಪ್ ಇಟ್ಟುಕೊಂಡಿದ್ದರು ಎನ್ನಲಾಗಿದೆ.

ಇದಾದ ನಂತರ ಕಳೆದ ಒಂದೂವರೆ ತಿಂಗಳಿಂದ ಪ್ರಿನ್ಸಿಪಾಲ್ ತರುಣನನ್ನು ರಿಜೆಕ್ಟ್ ಮಾಡಿದ್ದಾರೆ. ಇದರಿಂದ ತರುಣ್ ಮಾನಸಿಕ ಖಿನ್ನತೆಗೊಳಗಾಗಿ ನಾಲ್ಕೈದು ಬಾರಿ ಕೈ ಕೊಯ್ದುಕೊಂಡಿದ್ದ. ಇಷ್ಟಕ್ಕೆ ಸುಮ್ಮನಾಗದ ತರುಣ್ ನಿನ್ನೆ ಮತ್ತೆ ಕೈ ನರ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಪ್ರಿನ್ಸಿಪಾಲ್ ನನಗೆ ಬೇಕು ಎಂದು ತರುಣ್ ಪಟ್ಟು ಹಿಡಿದಿದ್ದಾನೆ. ಈಗಾಗಲೇ ಪ್ರಿನ್ಸಿಪಾಲ್‍ಗೆ ಮದುವೆಯಾಗಿ 20 ವರ್ಷದ ಮಗಳಿದ್ದಾಳೆ ಹಾಗೂ ಪತಿ ಕೇರಳದಲ್ಲಿದ್ದಾರೆ ಎಂದು ತಿಳಿದುಬಂದಿದೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ಪ್ರಿನ್ಸಿಪಾಲ್ ಖಿನ್ನತೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ