ಸ್ನೇಹಿತರೇ ಇಲ್ಲದ ಮೇಲೆ...

Kannada News

06-11-2017

ಬೆಂಗಳೂರು: ನಗರದ ಬೆಳ್ಳಂದೂರಿನ ಕೆಪಿಸಿ ಲೇಔಟ್‍ನಲ್ಲಿ ಅಪಘಾತದಲ್ಲಿ ಸ್ನೇಹಿತರು ಮೃತಪಟ್ಟಿದ್ದರಿಂದ ನೊಂದು ಮಾನಸಿಕ ಖಿನ್ನತೆಗೊಳಗಾಗಿದ್ದ ಯುವತಿಯೊಬ್ಬಳು ನೇಣಿಗೆ ಶರಣಾಗಿರುವ ದಾರುಣ ನಡೆದಿದೆ.

ಕೆಪಿಸಿ ಲೇಔಟ್‍ನ ಮೊದಲಿಯಾರ್ ರಸ್ತೆಯ ಅನು (21)ಎಂದು ಆತ್ಮಹತ್ಯೆಗೆ ಶರಣಾದವರನ್ನು ಗುರುತಿಸಲಾಗಿದೆ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅನು ಅವರ ಮೂವರು ಸ್ನೇಹಿತರು ಇತ್ತೀಚೆಗೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಅಂದಿನಿಂದ ನೊಂದು ಖಿನ್ನತೆಗೊಳಗಾಗಿದ್ದ ಅನು, ಸರಿಯಾಗಿ ಕೆಲಸಕ್ಕೆ ಹೋಗುತ್ತಿರಲಿಲ್ಲ. ಆಕೆಗೆ ಮನೆಯವರು ಚಿಕಿತ್ಸೆ ಕೊಡಿಸಿದ್ದರೂ ಸ್ಥಿತಿ ಸುಧಾರಿಸಿರಲಿಲ್ಲ. ನಿನ್ನೆ ರಾತ್ರಿ ತಂದೆ ರವಿಕುಮಾರ್ ಹೊರಗಡೆ ಹೋಗಿದ್ದಾಗ ಅನು ನೇಣಿಗೆ ಶರಣಾಗಿದ್ದಾರೆ. ಪ್ರಕರಣ ದಾಖಲಿಸಿರುವ ಬೆಳ್ಳಂದೂರು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

Kannada News Karnataka ಬೆಳ್ಳಂದೂರು ರಸ್ತೆ ಅಪಘಾತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ