ಅಕ್ರಮ ಸಂಬಂಧ ಕೊಲೆಯಲ್ಲಿ ಅಂತ್ಯ..

Kannada News

06-11-2017

ಬೆಂಗಳೂರು: ಕೋಣನಕುಂಟೆಯ ಗಣಪತಿ ನಗರದಲ್ಲಿ ತನ್ನೊಂದಿಗೆ ಸಹಜೀವನ ನಡೆಸುತ್ತಾ ಯಾವಾಗಲೂ ಲೈಂಗಿಕ ಕ್ರೀಯೆ ಬಯಸಿ ಅಲ್ಲದೇ ಶೀಲ ಶಂಕಿಸಿ ಕಿರುಕುಳ ನೀಡುತ್ತಿದ್ದ ಬಸ್ ಕ್ಲೀನರ್‍ನನ್ನು ಕುತ್ತಿಗೆ ಬಿಗಿದು ಮಹಿಳೆಯೊಬ್ಬಳು ಕೊಲೆಗೈದು ಮೃತದೇಹವನ್ನು ರಸ್ತೆಗೆ ಎಸೆದಿರುವ ಘಟನೆ ನಡೆದಿದೆ.

ಮೃತದೇಹ ಎಸೆದಿದ್ದ ಪ್ರಕರಣವನ್ನು ಬೇಧಿಸಿ, ಕನಕಪುರ ಮೂಲದ ಬಸ್ ಕ್ಲೀನರ್ ಮುತ್ತು ರಾಜ್ (26)ನನ್ನು ಕೊಲೆಗೈದ ಗಣಪತಿ ಪುರದ 6ನೇ ಮುಖ್ಯರಸ್ತೆಯ, ಸುನಂದ ಬಾಯಿ ಅಲಿಯಾಸ್ ಸುನಂದಾ (30)ಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸುನಂದಾಬಾಯಿಗೆ ವಿವಾಹವಾಗಿ ಇಬ್ಬರು ಮಕ್ಕಳಿದ್ದಾರೆ. ಕಳೆದ ವರ್ಷ ಪತಿ ಅಕಾಲಿಕವಾಗಿ ಮೃತಪಟ್ಟ ನಂತರ ವಜ್ರಮುನೇಶ್ವರ ಬಸ್‍ನ ಕ್ಲೀನರ್ ಆಗಿದ್ದ ಮುತ್ತುರಾಜ್ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು.

ಪರಸ್ಪರ ಇಬ್ಬರು ಒಪ್ಪಿ ಕಳೆದ ಕೆಲ ದಿನಗಳಿಂದ ಸಹಜೀವನ ನಡೆಸುತ್ತಿದ್ದರು. ಮದ್ಯ ವ್ಯಸನಿಯಾಗಿದ್ದ ಮುತ್ತುರಾಜ್, ಇತ್ತೀಚೆಗೆ ಶೀಲಶಂಕಿಸಿ, ಸುನಂದಾಳ ಜೊತೆ ಜಗಳಮಾಡುತ್ತಿದ್ದ. ಪ್ರತಿದಿನ ಕುಡಿದು ಬಂದು ಜಗಳ ಮಾಡುತ್ತಿದ್ದುದರಿಂದ ಬೇಸತ್ತ ಸುನಂದಾ ಮುತ್ತು ರಾಜ್‍ನನ್ನು ಮುಗಿಸಲು ಸಂಚು ರೂಪಿಸಿದಳು.

ಕಳೆದ ಅ. 30ರಂದು ರಾತ್ರಿ ಕುಡಿದು ಬಂದು ಗಲಾಟೆ ಮಾಡಿದ ಮುತ್ತುರಾಜ್‍ನನ್ನು ರೊಚಿಗೆದ್ದ ಸುನಂದಾ, ಕೆಳಗೆ ಬೀಳಿಸಿ ಪ್ಲಾಸ್ಟಿಕ್ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಳು. ಸಾಕ್ಷಿ ನಾಶಪಡಿಸಲು ಮೃತದೇಹವನ್ನು ಬೆಡ್‍ ಶೀಟ್‍ನಲ್ಲಿ ಹಾಕಿಕೊಂಡು ಗಣಪತಿ ಪುರದ 6ನೇ ರಸ್ತೆಗೆ ಎಳೆದುಕೊಂಡು ಹೋಗಿ ಬಿಸಾಕಿದ್ದಳು. ಮೃತದೇಹವ ಇರುವುದನ್ನು ಕಂಡ ಸ್ಥಳೀಯರು ಮಾಹಿತಿ ನೀಡಿದ ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ ಕೋಣನಕುಂಟೆ ಪೊಲೀಸರಿಗೆ ಆತ ಮುತ್ತುರಾಜ್ ಎನ್ನುವುದು ಪತ್ತೆಯಾಗಿದೆ. ಮುತ್ತುರಾಜ್ ತಾಯಿ ಗೌರಮ್ಮ ಅವರಿಂದ ದೂರು ದಾಖಲಿಸಿ, ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Kannada News Kanrnataka ಶೀಲ ಶಂಕಿಸಿ ಮೃತದೇಹ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ