ಬೆಂಗಳೂರು ಕೃಷಿ ಮೇಳ ಬಂತು…

Kannada News

04-11-2017

ಇದೇ ನವೆಂಬರ್ 16ರಿಂದ 19ರ ವರೆಗೆ ಬೆಂಗಳೂರು ಕೃಷಿ ಮೇಳ-2017 ಆಯೋಜಿಸಲಾಗಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಜಿಕೆವಿಕೆ ಅಂದರೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ನಡೆಯಲಿರುವ ನಾಲ್ಕು ದಿನಗಳ ಈ ಕೃಷಿ ಮೇಳ, ರಾಜ್ಯಸರ್ಕಾರದ ಕೃಷಿ ಇಲಾಖೆಯ ಸಹಭಾಗಿತ್ವದೊಂದಿಗೆ ನಡೆಯಲಿದೆ.

ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಹೈನುಗಾರಿಕೆ, ಮತ್ಸ್ಯೋದ್ಯಮ, ಜೇನು ಸಾಕಣೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಇತ್ತೀಚಿನ ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಬಗ್ಗೆ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಈ ಕೃಷಿ ಮೇಳ ಮತ್ತು ವಸ್ತು ಪ್ರದರ್ಶನದಲ್ಲಿ ದೇಶಿ ತಳಿಯ ಜಾನುವಾರುಗಳ ಪ್ರದರ್ಶನ, ಕೃಷಿ ಚಟುವಟಿಕೆಗಳಲ್ಲಿ ಬಳಸಬಹುದಾದ ಆಧುನಿಕ ಯಂತ್ರೋಪಕರಣಗಳು, ವಿವಿಧ ರೀತಿಯ ಕೃಷಿ ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತದೆ. ಉತ್ತಮ ತಳಿಯ ಬಿತ್ತನೆ ಬೀಜಗಳು, ಪ್ರಾಣಿಗಳು, ಕೀಟಗಳು, ಇಲಿಗಳ ಹಾವಳಿ ತಡೆಯಲು ಬಳಸುವ ವಿವಿಧ ವಿಧಾನಗಳ ಬಗ್ಗೆಯೂ ಮಾಹಿತಿ ದೊರೆಯುತ್ತದೆ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆಯೋಜಿಸುವ ಈ ಕೃಷಿ ಮೇಳ ಮತ್ತು ವಸ್ತು ಪ್ರದರ್ಶನಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳ ಲಕ್ಷಾಂತರ ಜನ ರೈತರು ಭೇಟಿ ಕೊಟ್ಟು ಮಾಹಿತಿ ಪಡೆಯುತ್ತಾರೆ.

ವಿವಿಧ ಬೆಳೆಗಳ ಕೃಷಿ ಪ್ರಾತ್ಯಕ್ಷಿಕೆಗಳ ಜೊತೆಗೆ, ಜನರು ಕೊಳ್ಳಬಯಸುವ ವಿವಿಧ ವಸ್ತುಗಳನ್ನು ಮಾರುವ ಒಂದು ಸಾವಿರಕ್ಕೂ ಹೆಚ್ಚು ಸ್ಟಾಲ್‌ಗಳು ಕೃಷಿ ಮೇಳದಲ್ಲಿರುತ್ತವೆ. ಇವೆಲ್ಲಾ ಕಾರಣಗಳಿಂದ, ಒಂದು ವಿಶಿಷ್ಟ ಹಬ್ಬ ಮತ್ತು ಜಾತ್ರೆಯಂತೆ ಕಂಡುಬರುವ ನಾಲ್ಕು ದಿನಗಳ ಈ ಕೃಷಿ ಮೇಳದಲ್ಲಿ, ಬೆಂಗಳೂರಿನ ಲಕ್ಷಾಂತರ ನಾಗರಿಕರು ತಮ್ಮ ಮಕ್ಕಳು, ಸ್ನೇಹಿತರೊಂದಿಗೆ ಭಾರಿ ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸುತ್ತಾರೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ಕೃಷಿ ಮೇಳ ತಂತ್ರಜ್ಞಾನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ