‘ಕಿತ್ತೂರು ಚೆನ್ನಮ್ಮ ರೀತಿ ಧೈರ್ಯವಂತರಾಗಿ’

Kannada News

04-11-2017

ಮಂಡ್ಯ: ಮಹಿಳೆಯರು ಕಿತ್ತೂರುರಾಣಿ ಚೆನ್ನಮ್ಮನ ಇತಿಹಾಸವನ್ನು ತಿಳಿದುಕೊಂಡು, ಅವರ ರೀತಿಯೇ ಧೈರ್ಯವಂತರಾಗಬೇಕು ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಹೇಳಿದ್ದಾರೆ.

ಮಂಡ್ಯದ, ಪಾಂಡವಪುರ ಪಟ್ಟಣದ ಮಿನಿ ವಿಧಾನಸೌಧದ ತಹಸೀಲ್ದಾರ್ ಕಚೇರಿಯಲ್ಲಿ, ತಾಲ್ಲೂಕು ಆಡಳಿತದಿಂದ ಆಯೋಜಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಪುಟ್ಟಣ್ಣಯ್ಯ ಮಾತನಾಡಿದರು.

ಮಹಿಳೆಯರು ಕಿತ್ತೂರುರಾಣಿ ಚೆನ್ನಮ್ಮನ ಇತಿಹಾಸವನ್ನು ತಿಳಿದುಕೊಂಡು ಅವರ ರೀತಿಯೇ ಧೈರ್ಯವಂತರಾಗಬೇಕು. ಚೆನ್ನಮ್ಮ ದಿಟ್ಟತನ, ಕೆಚ್ಚೆದೆಯ ಹೋರಾಟ ಹಾಗೂ ಅವರ ಕಾಲದ ರಾಜಾಳ್ವಿಕೆಯ ನೀತಿಗಳ ಬಗ್ಗೆ ಜಾಗೃತಿ ಮೂಡಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಆಹ್ವಾನಿಸಬೇಕು ಎಂದು ತಾಲ್ಲೂಕು ಆಡಳಿತಕ್ಕೆ ಸೂಚಿಸಿದರು.

ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಂಡು ಕಪ್ಪ ಕೊಡುವುದಕ್ಕೆ ಒಪ್ಪಿಕೊಂಡಿದಿದ್ದರೆ ನೆಮ್ಮದಿಯಿಂದ ಜೀವನ ನಡೆಸ ಬಹುದಾಗಿತ್ತು. ಆದರೆ, ಚೆನ್ನಮ್ಮ ಆ ರೀತಿ ಮಾಡಲಿಲ್ಲ, ಕಪ್ಪ ಕೇಳಿದ ಬ್ರಿಟಿಷರ ವಿರುದ್ಧ ಹೋರಾಟ ನಡೆಸುವ ಮೂಲಕ ಕಿತ್ತೂರು ಸಾಮ್ರಾಜ್ಯದ ರಕ್ಷಣೆಗೆ ಮುಂದಾದ ಧೀರ ಮಹಿಳೆ ಕಿತ್ತೂರು ಚೆನ್ನಮ್ಮ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ