ಮಟ್ಕಾ ದಂಧೆ: 6 ಮಂದಿ ಬಂಧನ

Kannada News

04-11-2017 894

ಮಂಗಳೂರು: ಮಂಗಳೂರು ನಗರದ ಸರ್ವೀಸ್ ಬಸ್ ನಿಲ್ದಾಣ ಪರಿಸರದಲ್ಲಿ, ಅಕ್ರಮವಾಗಿ ಮಟ್ಕಾ ದಂಧೆ ನಡೆಸುತ್ತಿದ್ದ 6 ಮಂದಿಯನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ಬಸ್ ನಿಲ್ದಾಣ ಬಳಿಯ, ಒಣಮೀನು ಮಾರುಕಟ್ಟೆಯ ಪರಿಸರದಲ್ಲಿ ಅಕ್ರಮವಾಗಿ ಮಟ್ಕಾ ದಂಧೆಯನ್ನು ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು, ಮಟ್ಕಾ ದಂಧೆಯಲ್ಲಿ ನಿರತರಾಗಿದ್ದ ,ಬಜಾಲಿನ ರಾಕೆಶ್ ಪೂಜಾರಿ, ಸ್ಟೇಟ್ ಬ್ಯಾಂಕ್ ಮಿಷನ್ ಕಂಪೌಂಡ್ ನಿವಾಸಿ ದಯಾನಂದ, ಗೋರಿಗುಡ್ಡೆ ಪಂಡಿತ್ ಹೌಸ್ ಅಶೋಕ್, ಉಜ್ಜೋಡಿ ನಿವಾಸಿ ನಂದನ್, ಜೆಪ್ಪು ಬಪ್ಪಾಲ್ ಮಹಮ್ಮದ್ ಯಾಸಿನ್, ಅಡ್ಡೂರಿನ ಇಮ್ತಿಯಾಜ್ ಯಾಸಿನ್ ಅವರನ್ನು ಪೋಲಿಸರು ಬಂಧಿಸಿದ್ದಾರೆ. ಇದಲ್ಲದೇ ಕೃತ್ಯಕ್ಕೆ ಬಳಸಲಾಗುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದು, ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ