ಪುಟ್ಟಣ್ಣಯ್ಯ-ಜೆಡಿಎಸ್: ಭೂಮಿ ಪೂಜೆ ಗಲಾಟೆ..

Kannada News

04-11-2017

ಪಾಂಡವಪುರ: ರಸ್ತೆ ಕಾಮಗಾರಿಯ ಭೂಮಿ ಪೂಜೆಗೆ ಆಗಮಿಸಿದ್ದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರಿಗೆ ಜೆಡಿಎಸ್ ಕಾರ್ಯಕರ್ತರು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಜೆಡಿಎಸ್ ಹಾಗೂ ರೈತಸಂಘದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಇದರಿಂದ ಒಂದೇ ಕಾಮಗಾರಿಗೆ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಹಾಗೂ ಸಿ.ಎಸ್.ಪುಟ್ಟರಾಜು ಪ್ರತ್ಯೇಕವಾಗಿ ಗುದ್ದಲಿ ಪೂಜೆ ನೆರವೇರಿಸಿದರು.

ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಗುದ್ದಲಿ ಪೂಜೆ ಮಾಡಲು ಆಗಮಿಸಿದ ಸಂದರ್ಭದಲ್ಲಿ ಸೀತಾಪುರ ಗ್ರಾಮದ ಕುಮಾರ್ ಎಂಬ ವ್ಯಕ್ತಿಯೇ ಶಾಸಕರನ್ನು ನಿಂದಿಸಿದರು. ಪುಟ್ಟಣ್ಣಯ್ಯ ನನ್ನನ್ನು ವಿನಾ ಕಾರಣ ಮರಳು ದಂಧೆಕೋರ ಎಂದು ಈ ಹಿಂದೆ ನಿಂದಿಸಿದ್ದಾರೆ, ನಾನು ಯಾವ ದಂದೆ ಮಾಡಿದ್ದೀನಿ ತೋರಿಸಿ ಎಂದು ಏಕಾಏಕಿ ಗಲಾಟೆ ಪ್ರಾರಂಭಿಸಿ ಪೂಜೆ ಮಾಡದಂತೆ ತಡೆ ಒಡ್ಡಿದನಲ್ಲದೇ, ಸದರಿ ರಸ್ತೆ ಕಾಮಗಾರಿಯ ಅನುದಾನವನ್ನು ಸಂಸದ ಸಿ.ಎಸ್.ಪುಟ್ಟರಾಜು ಅವರು ಬಿಡುಗಡೆ ಮಾಡಿಸಿದ್ದಾರೆ ಅವರು ಬಂದ ನಂತರ ಪೂಜೆ ಮಾಡಿ ಎಂದು ಗಲಾಟೆ ಮಾಡಲು ಪ್ರಾರಂಭಿಸಿದನು.

ಈ ಸಂದರ್ಭದಲ್ಲಿ ರೈತಸಂಘ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಯಿತು. ಪೂಜೆಯನ್ನು ರದ್ದು ಪಡಿಸಿ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ವಾಪಸ್ಸು ಹೋಗಲು ತೀರ್ಮಾನಿಸಿದಾಗ, ರೈತ ಸಂಘದ ಕಾರ್ಯಕರ್ತರು ಪೂಜೆ ಮಾಡಿಯೇ ಹೋಗಿ ಎಂದು ಬಲವಂತ ಮಾಡಿದ್ದರಿಂದ ಪುಟ್ಟಣ್ಣಯ್ಯ ಭೂಮಿ ಪೂಜೆ ಸಲ್ಲಿಸಿದರು.

ಇದಾದ ಕೆಲವೇ ಕ್ಷಣಗಳಲ್ಲಿ ಸಂಸದ ಸಿ.ಎಸ್.ಪುಟ್ಟರಾಜು ಸಹಾ ಸ್ಥಳಕ್ಕೆ ಆಗಮಿಸಿ ಮತ್ತೆ ಇದೇ ಕಾಮಗಾರಿಗೆ ತಮ್ಮ ಬೆಂಬಲಿಗರೊಂದಿಗೆ ಪೂಜೆ ಸಲ್ಲಿಸಿದರು. ಈ ವೇಳೆಯೂ ರೈತ ಸಂಘ ಮತ್ತು ಜೆಡಿಎಸ್ ಕಾರ್ಯಕತರ್ಯರ ನಡುವೆ ಮತ್ತೆ ಮಾತಿನ ಚಕಮಕಿ ನಡೆಯಿತು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ