ರಸ್ತೆಯಲ್ಲಿ ಜಾನುವಾರು: ಪುರಸಭೆ ಕಚೇರಿಗೆ ಬೀಗ...

Kannada News

04-11-2017

ಚಾಮರಾಜನಗರ: ಗುಂಡ್ಲುಪೇಟೆಯ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಸಂಚರಿಸಲು ಸಾರ್ವಜನಿಕರ ವಾಹನಗಳಿಗೆ ತೊಂದರೆ ಕೊಡುತ್ತಿದ್ದಂತಹ ಬೀದಿ ದನಗಳನ್ನು ಸಾರ್ವಜನಿಕರು ಪುರಸಭೆಯ ಕಛೇರಿ ಒಳಗಡೆ ಕರೆದುಕೊಂಡು ಹೋಗಿ, ಗೇಟಿಗೆ ಬೀಗ ಜಡಿಯುವ ಮೂಲಕ ಪುರಸಭೆಯ ಅಧಿಕಾರಿಗಳಿಗೆ ಬಿಸಿಮುಟ್ಟಿಸಿದರು.

ಇದನ್ನರಿತ ದನಕರುಗಳ ಮಾಲೀಕರು ಪುರಸಭೆಕಛೇರಿಗೆ ಮುತ್ತಿಗೆ ಹಾಕಿ ಪುರಸಭೆ ಅಧಿಕಾರಿಗಳು ಮತ್ತು ಪೋಲೀಸರ ನಡುವೆ ಮಾತಿನ ಚಕಮಕಿ ನಡೆದು ಕೈ ಮಿಲಾಯಿಸುವ ಹಂತಕ್ಕೂ ತಲುಪಿತ್ತು. ನಂತರದಲ್ಲಿ ಅಧಿಕಾರಿಗಳು ದನಕರುಗಳ ಮಾಲಿಕರನ್ನು ಕರೆದು, ರಸ್ತೆಯಲ್ಲಿ ದನಗಳನ್ನು ಬಿಡುವುದರಿಂದ ಸಾರ್ಜನಿಕರಿಗೆ ಮತ್ತು ವಾಹನಗಳಿಗೆ ತೊಂದರೆಯಾಗುತ್ತಿದೆ, ಆದಕಾರಣ ನೀವು ನಿಮ್ಮ ಮನೆಗಳ ಮುಂದೆ ದನಕರುಗಳನ್ನು ಸಾಕಿ, ಇಲ್ಲವಾದಲ್ಲಿ ಈ ರೀತಿ ಬಿಡುವುದರಿಂದ ದನಕರುಗಳ ಮಾಲೀಕರ ಮೇಲೆ ದೂರ ದಾಖಲಿಸಿ, ದನಕರುಗಳನ್ನು ಮೈಸೂರಿನ ಪಿಂಜಿಪಾಲ್ಗೆ ಬಿಡಲಾಗುವುದೆಂದು ತಿಳಿಸಿ, ಮುನ್ನೆಚ್ಚರಿಕೆ ನೀಡಿ, ಮುಚ್ಚಳಿಕೆಯನ್ನು ಬರೆಸಿಕೊಂಡು ಮಾಲೀಕರಿಗೆ ದನಕರುಗಳನ್ನು ಬಿಡುಗಡೆ ಮಾಡಿ ಕಳುಹಿಸಿದರು.


ಸಂಬಂಧಿತ ಟ್ಯಾಗ್ಗಳು

Kannada News Karnataka ಗುಂಡ್ಲುಪೇಟೆ ಪುರಸಭೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ