ಪರಮೇಶ್ವರ್: ಮೆಡಿಕಲ್ ಸಂಸ್ಥೆ ಮೇಲೆ ದಾಳಿ

Kannada News

04-11-2017

ನೆಲಮಂಗಲ: ಸರ್ಕಾರಕ್ಕೆ ತೆರಿಗೆ ನೀಡದೆ ವಂಚಿಸಿರುವ ಆರೋಪದಡಿ ವಿವಿಧ ಬಡಾವಣೆ ಗೋಡೌನ್ ಮತ್ತು ಕಟ್ಟಡಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲ್ಲೂಕಿನ ಕುಲುವನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿದೆ.

ಪರಿಶೀಲನೆ ವೇಳೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಒಡೆತನದ ಸಿದ್ದಾರ್ಥ ಮೆಡಿಕಲ್ ಸಂಸ್ಥೆ ಮೇಲೂ ಸಹ ದಾಳಿ ನಡೆದಿದ್ದು, ಸರಿ ಸುಮಾರು 45 ಲಕ್ಷ ರೂ. ತೆರಿಗೆ ವಂಚನೆ ಆರೋಪ ಕೇಳಿ ಬಂದಿದೆ. ಹೀಗಾಗಿ ಡಾ. ಜಿ.ಶಿವಪ್ರಕಾಶ್ ಹೆಸರಿನಲ್ಲಿರುವ ಸಿದ್ದಾರ್ಥ ಮೆಡಿಕಲ್ ಸಂಸ್ಥೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಕುಲುವನಹಳ್ಳಿ ಪಂಚಾಯ್ತಿ ಸದಸ್ಯರಾದ ಜಗದೀಶ್ ಮತ್ತು ಕೆಂಪಯ್ಯ ಎನ್ನುವವರು ಗ್ರಾಮೀಣಾಭಿವೃದ್ಧಿ ಇಲಾಖೆಗೆ ನೀಡಿದ ದೂರಿನ ಮೇಲೆ ಈ ತನಿಖೆ ಕೈಗೊಳ್ಳಲಾಗಿದ್ದು, ತನಿಖೆಯ ನಂತರ ಸಂಪೂರ್ಣ ವರದಿಯನ್ನು ಲೋಕಾಯುಕ್ತ ಇಲಾಖೆಗೆ ಸಲ್ಲಿಸಲಾಗುವುದು ಎಂದು ಲೋಕಾಯುಕ್ತ ಎಇಇ ಶ್ರೀನಿವಾಸ್ ಮೂರ್ತಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ತೆರಿಗೆ ಲೋಕಾಯುಕ್ತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ