ಯುವಕನ ಪ್ರಾಣ ತೆಗೆದ ಇರುವೆ..!

Kannada News

04-11-2017

ಕಾರವಾರ: ಕಪ್ಪು ಇರುವೆ ಕಚ್ಚಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಅಂಗವಿಕಲ ಯುವಕ ಶಿವು ಚಂದ್ರಸ್ವಾಮಿ (19) ಎಂಬಾತ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಘಟನೆಯು ಕಾರವಾರದಲ್ಲಿ ನಡೆದಿದೆ.

ಕಾರವಾರದ ಬೈತ್‌ಖೋಲ್‌ನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ತಾಯಿ ಜತೆ ಗುಡಿಸಲಿನಲ್ಲಿ ಈತ ವಾಸವಾಗಿದ್ದ. ತುಳಸಿ ವಿವಾಹಕ್ಕಾಗಿ(ತುಳಸಿ ಪೂಜೆ) ಮನೆಯಲ್ಲಿ ಕಬ್ಬನ್ನು ತಂದಿಟ್ಟಿದ್ದರು. ಈ ವೇಳೆ ಅದಕ್ಕೆ ಕಪ್ಪು ಇರುವೆ ಬಂದಿದ್ದು, ತಾಯಿ ಕೆಲಸಕ್ಕೆ ತೆರಳಿದ ಸಂದರ್ಭದಲ್ಲಿ ಇರುವೆ ಶಿವುವನ್ನು ಸಂಪೂರ್ಣವಾಗಿ ಆಕ್ರಮಿಸಿ ಆತನನ್ನು ಕಚ್ಚಿದೆ. ನೋವು ತಾಳಲಾರದೆ ಆತ ಕಿರುಚಾಟ ಪ್ರಾರಂಭಿಸಿದ್ದಾನೆ. ಅದನ್ನು ಕೇಳಿದ ಸ್ಥಳೀಯರು ಸ್ಥಳಕ್ಕಾಗಮಿಸಿದ್ದಾಗ ಆತ ಅಸ್ವಸ್ಥಗೊಂಡಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಶಿವು ಅಸುನೀಗಿದ್ದಾನೆ.

ತೀರಾ ಬಡತನದಲ್ಲಿದ್ದ ಅವರಿಗೆ ಕುಟುಂಬಕ್ಕೆ ಆತನ ಶವ ಸಂಸ್ಕಾರ ನಡೆಸಲೂ ಹಣವಿಲ್ಲದೇ ಕೊರಗುತ್ತಿದ್ದರು. ಬಳಿಕ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ, ನಗರಸಭಾ ಸದಸ್ಯೆ ಛಾಯಾ ಜಾವ್ಕಾರ್ ಹಾಗೂ ಸ್ಥಳೀಯ ಸಮಾಜ ಸೇವಕ ವಿಲ್ಸನ್ ಫರ್ನಾಂಡಿಸ್ ಮಾಹಿತಿ ತಿಳಿದು ಆತನ ಅಂತಿಮ ಸಂಸ್ಕಾರ ನೆರವೇರಿಸಿದರು.


ಸಂಬಂಧಿತ ಟ್ಯಾಗ್ಗಳು

Kannada News Karnataka ಇರುವೆ ಕಾರವಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ