ಹೈಟೆಕ್ ವಂಚಕರು..

Kannada News

04-11-2017

ಮೈಸೂರು: ಆನ್ ಲೈನ್‍ನಲ್ಲಿ ದುಬಾರಿ ಬೆಲೆಯ ವಸ್ತುಗಳನ್ನು ಖರೀದಿಸಿ ತದನಂತರ ಆ ವಸ್ತುಗಳು ಬಂದಿಲ್ಲವೆಂದು ಹೇಳಿ ಪುನಃ ಪಡೆಯುತ್ತಿದ್ದ ಮೂವರ ವಿರುದ್ಧ ಅಮೆಜಾನ್ ಸಂಸ್ಥೆ ದೂರು ದಾಖಲಿಸಿದೆ. ಇ-ಕಾಮರ್ಸ್‍ನ ವೆಂಕಟೇಶ್, ಆನಂದ್, ಶಶಿಕುಮಾರ್ ವಿರುದ್ಧ ದೂರು ದಾಖಲಾಗಿದೆ. ಇವರು ನಕಲಿ ಇ-ಮೇಲ್ ವಿಳಾಸ ನೀಡಿ ಅಮೆಜಾನ್‍ ನಲ್ಲಿ ಖಾತೆ ತೆರೆದು 45 ಸಾವಿರ ಬೆಲೆಯ 7 ಐಫೋನ್ ಖರೀದಿಸಿ ಆನ್‍ಲೈನ್‍ನಲ್ಲಿ ಹಣ ಪಾವತಿಯೂ ಮಾಡಿದ್ದಾರೆ. ತದನಂತರ ಮೊಬೈಲ್ ಕೈ ಸೇರಿದ ಬಳಿಕ ಕಂಪನಿಗೆ ಕರೆ ಮಾಡಿ ಖಾಲಿ ಬಾಕ್ಸ್ ಬಂದಿದೆ ಎಂದು ಹೇಳಿ ಪುನಃ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದರು. ಈ ಬಗ್ಗೆ ಅಮೆಜಾನ್ ಸಂಸ್ಥೆ ನಿರ್ದೇಶಕ ನಿಷಾದ್ ಶರ್ಮಾ ಇವರ ನಡವಳಿಕೆಯ ಬಗ್ಗೆ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದಾಗ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ಆನ್ ಲೈನ್‍ ಇ-ಕಾಮರ್ಸ್‍


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ