ಚಿನ್ನದಾಸೆಗೆ ಜೈಲು ಪಾಲಾದ ವ್ಯಕ್ತಿ !

Kannada News

03-11-2017

ಬೆಂಗಳೂರು: ಕಾರಿನಲ್ಲಿಟ್ಟಿದ್ದ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ಸುಬ್ರಮಣ್ಯ ನಗರ ಪೊಲೀಸರು ಬಂಧಿಸಿದ್ದಾರೆ. ಕೆಂಗೇರಿ ಉಪನಗರ ಗಾಂಧಿನಗರದ ಚಂದ್ರಶೇಖರ್ ಅಲಿಯಾಸ್ ಚಂದು (29)ಬಂಧಿತ ಆರೋಪಿ.

ಬಂಧಿತನಿಂದ 5 ಲಕ್ಷ ರೂ. ಮೌಲ್ಯದ 32 ಗ್ರಾಂ ಚಿನ್ನದ ಸರ, ವಜ್ರದ ಪೆಂಡೆಂಟ್, ಹ್ಯಾಂಗಿಂಗ್ಸ್, ಒಂದು ಜೊತೆ ಓಲೆಗಳು, 2 ಗಡಿಯಾರಗಳು, ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಜಾಜಿನಗರದ ಫಿನಿಕ್ಸ್ ಅಪಾರ್ಟ್‍ಮೆಂಟ್ ಗೆ ಮದುವೆಯ ಮೆಹಂದಿ ಕಾರ್ಯಕ್ರಮಕ್ಕೆ ಬಂದಿದ್ದವರು ಹೊರಗೆ ನಿಲ್ಲಿಸಿದ್ದ ಕಾರಿನ ಗಾಜು ಒಡೆದು ಆರೋಪಿಯು ಕಳ್ಳತನ ಮಾಡಿದ್ದನು. ಪ್ರಕರಣ ದಾಖಲಿಸಿಕೊಂಡ ರಾಜಾಜಿನಗರದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ ಎಂದು ಡಿಸಿಪಿ ಚೇತನ್ ಸಿಂಗ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Kannad News Karnataka ಬೆಲೆ ಬಾಳುವ ವಜ್ರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ