ರೌಡಿಗಳಿಗೆ ಡಿಸಿಪಿ ಖಡಕ್ ಎಚ್ಚರಿಕೆ..

Kannada News

03-11-2017

ಬೆಂಗಳೂರು: ಸಂಪಿಗೆಹಳ್ಳಿಯ ವಿವಿಧೆಡೆ ರೌಡಿ ಚಟುವಟಿಕೆಗಳಲ್ಲಿ ತೊಡಗಿರುವ 81 ಮಂದಿ ರೌಡಿಗಳ ಮನೆ ಮೇಲೆ ದಾಳಿ ನಡೆಸಿರುವ ಈಶಾನ್ಯ ವಿಭಾಗದ ಪೊಲೀಸರು, ಅವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.

ಸಂಪಿಗೆಹಳ್ಳಿ, ಅಮೃತಹಳ್ಳಿ, ಬಾಗಲೂರು, ಕೊತ್ತನೂರು, ಪೊಲೀಸ್ ಠಾಣೆಗಳ ವ್ಯಾಪ್ತಿಯ 81 ರೌಡಿಗಳನ್ನು ಸಂಪಿಗೆಹಳ್ಳಿ ಎಸಿಪಿ ಕಚೇರಿಗೆ ಕರೆತಂದ ಪೊಲೀಸರು ಅವರ ಪೂರ್ವಾಪರಗಳನ್ನು ಪರಿಶೀಲನೆ ನಡೆಸಿದರು. ಅಪರಾಧ ಚಟುವಟಿಕೆಗಳಲ್ಲಿ ತೊಡಗದಂತೆ, ಭೂವ್ಯಾಜ್ಯಗಳಲ್ಲಿ ತಲೆಹಾಕದಂತೆ, ಅಪರಾಧಗಳಿಗೆ ನೆರವಾಗದಂತೆ, ರೌಡಿಗಳಿಗೆ, ಡಿಸಿಪಿ ಎಸ್. ಗಿರೀಶ್ ಅವರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

ಬರುವ ವಿಧಾನಸಭಾ ಚುನಾವಣೆಯಲ್ಲಿಯೂ ಯಾವುದೇ ಅಪರಾಧ ಹಾಗೂ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು. ಒಂದು ವೇಳೆ ಭಾಗಿಯಾಗಿರುವುದು ಕಂಡುಬಂದರೆ, ಅಂತಹವರನ್ನು ಮುಲಾಜಿಲ್ಲದೆ ಬಂಧಿಸಿ, ಶಿಕ್ಷೆ ವಿಧಿಸಲಾಗುವುದು ಎಂದರು. ಅಪರಾಧ ಚಟುವಟಿಕೆಗಳನ್ನು ಬಿಟ್ಟು ಉತ್ತಮ ಜೀವನ ನಡೆಸಿದರೆ, ಅವರನ್ನು ರೌಡಿ ಪಟ್ಟಿಯಿಂದ ಕೈಬಿಡಲು ಚಿಂತನೆ ನಡೆಸಲಾಗುವುದು ಎಂದು ಗಿರೀಶ್ ಭರವಸೆ ನೀಡಿದರು. ಇದೇ ವೇಳೆ ವಿಚಾರಣೆ ನಡೆಸಿದ ಎಲ್ಲಾ 81 ಮಂದಿ ರೌಡಿಗಳ ವಿಳಾಸ, ಉದ್ಯೋಗ, ಸಂಬಂಧಿಕರ ವಿವರವನ್ನು ಪೊಲೀಸರು ದಾಖಲಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ಡಿಸಿಪಿ ರೌಡಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ