ಸಿಕ್ಕಿಬಿದ್ದ ಮಾದಕವಸ್ತು ಮಾರಾಟಗಾರ !

Kannada News

03-11-2017

ಬೆಂಗಳೂರು: ಮಾದಕವಸ್ತುವಾದ ಓಪಿಯಂ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಕೋಣನಕುಂಟೆ ಪೊಲೀಸರು 50 ಸಾವಿರ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಚಿಕ್ಕಪೇಟೆಯ ಗಾಣಿಗರ ಪೇಟೆಯ ಲಕ್ಷ್ಮಣ್ ಅಲಿಯಾಸ್ ಲಕ್ಷ್ಮಣ್ ರಾಮ್ ಪಾಟೇಲ್(30)ಎಂದು ಬಂಧಿತ ಆರೋಪಿಯನ್ನು ಗುರುತಿಸಲಾಗಿದೆ. ರಾಜಸ್ಥಾನದ ಜಾಲೂರು ಮೂಲದ ಆರೋಪಿಯು ಆರ್.ಬಿ.ಐ ಲೇಔಟ್ 5ನೇ ಮೈನ್ 2ನೇ ಕ್ರಾಸ್ ಖಾಲಿ ನಿವೇಶನ ಬಳಿ ಓಪಿಯಂ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಆರೋಪಿಯಿಂದ 44 ಗ್ರಾಂ. ತೂಕದ ಓಪಿಯಂ, ಮೊಬೈಲ್, 500 ರೂ ನಗದು ಸೇರಿ 50 ಸಾವಿರ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಡಾ.ಎಸ್.ಡಿ.ಶರಣಪ್ಪ ಅವರು ತಿಳಿಸಿದ್ದಾರೆ. ಆರೋಪಿಯು ಓಪಿಯಂ ಅನ್ನು ಪರಿಚಯವಿರುವ ರಾಜಸ್ಥಾನದ ವ್ಯಕ್ತಿಯೊಬ್ಬನಿಂದ ತಂದು ಅದನ್ನು ಚಿಕ್ಕ ಚಿಕ್ಕ ಪ್ಯಾಕ್ ಮಾಡಿ ಬೆಂಗಳೂರಿನಲ್ಲಿ ಪರಿಚಯವಿರುವ ವ್ಯಕ್ತಿಗಳಿಗೆ ಮಾರಾಟಮಾಡಿ ಹಣಗಳಿಸುತ್ತಿರುವುದು ವಿಚಾರಣೆಯಲ್ಲಿ ತಿಳಿದುಬಂದಿದೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ಓಪಿಯಂ ರಾಜಸ್ಥಾನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ