‘ಜೆಡಿಎಸ್ ಗೆ ಇದೇ ಕೊನೇ ಚುನಾವಣೆ’-ಡಿವಿಎಸ್

Kannada News

03-11-2017

ತುಮಕೂರು: ರಾಜ್ಯ ಕಾಂಗ್ರೆಸ್ ಅನ್ನು ಮಣಿಸಲೆಂದೇ ಬಿಜೆಪಿ ರಾಜ್ಯಾದ್ಯಂತ ಪರಿವರ್ತನಾ ಯಾತ್ರೆ ಮಾಡುತ್ತಿದ್ದು, ಪಕ್ಷದ ಮುಖಂಡರು, ಕಾರ್ಯಕರ್ತರು ಸಾಥ್ ನೀಡುತ್ತಿದ್ದಾರೆ. ಇನ್ನು ರ‍್ಯಾಲಿಯುದ್ದಕ್ಕೂ, ರಾಜ್ಯ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿದ್ದಾರೆ.

ತುಮಕೂರಿನಲ್ಲಿ ನಡೆಯುತ್ತಿರುವ ರ‍್ಯಾಲಿಯಲ್ಲಿ ಮಾತನಾಡಿದ ಕೇಂದ್ರ ಸಚಿವರು ಆದ ಡಿ.ವಿ ಸದಾನಂದ ಗೌಡ, ಜೆಡಿಎಸ್ಗೆ ಇದೇ ಕೊನೆಯ ಚುನಾವಣೆ ಎಂದು ಹೇಳಿದ್ದಾರೆ. ಇವರಲ್ಲಿ ಒಳ ಒಪ್ಪಂದ ಹೆಚ್ಚು, ಇನ್ನೂ ಕಾಂಗ್ರೆಸ್ ಮುಳುಗುವ ಹಡಗು ಎಂದು ಟೀಕಿಸಿದ್ದು, ಕೈ ಪಕ್ಷದಲ್ಲಿ ಡಿಕೆಶಿ, ಸಿದ್ದರಾಮಯ್ಯ, ಜಿ.ಪರಮೇಶ್ವರ್ ಹೀಗೆ ಹಲವು ಗುಂಪು ಇದೆ, ಇದನ್ನು ಸರಿ ಮಾಡುವುದೇ ಅವರಿಗೆ ಸಾಕಾಗಿದೆ, ಎಂದು ವ್ಯಂಗ್ಯವಾಡಿದರು. ಆದ್ದರಿಂದ ನವಕರ್ನಾಟಕ ನಿರ್ಮಾಣಕ್ಕಾಗಿ ಬಿಜೆಪಿ ಬೆಂಬಲಿಸಿ ಎಂದು, ಜನರಲ್ಲಿ ಮನವಿ ಮಾಡಿದರು.

 


ಸಂಬಂಧಿತ ಟ್ಯಾಗ್ಗಳು

Kannada News Karnataka ಒಳ ಒಪ್ಪಂದ ಟೀಕಾ ಪ್ರಹಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ