ಮಳೆಗೆ ಮತ್ತೆ ಬೆಚ್ಚಿಬಿದ್ದ ಚೆನ್ನೈ...

Kannada News

03-11-2017

ಚೆನ್ನೈ: ಚೆನ್ನೈನಲ್ಲಿ ಕಳೆದ ರಾತ್ರಿ ಸುರಿದ ಮಳೆಗೆ ಜನ ಬೆಚ್ಚಿಬಿದ್ದಾರೆ. ಕಾಂಚೀಪುರಂ ಮತ್ತು ತಿರುವಳ್ಳುರ್ ಜಿಲ್ಲೆಯಲ್ಲಿ ಸುಮಾರು ಹತ್ತು ಗಂಟೆಗಳಿಗೂ ಹೆಚ್ಚುಕಾಲ ಭಾರೀ ಮಳೆಯಾಗಿರುವುದು ವರದಿಯಾಗಿದೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಜನರು ಪರದಾಡುವಂತಾಗಿದೆ. ಇನ್ನು ಮಳೆಯಿಂದಾಗಿ ಚೆನ್ನೈ,ಕಾಂಚೀಪುರಂ ಮತ್ತು  ತಿರುವಳ್ಳುರ್ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.

ಈ ಭೀಕರ ಮಳೆಯು 2015ರ ರಲ್ಲಿ ಸೃಷ್ಟಿಸಿದ್ದ ಪ್ರಹಾವನ್ನು ನೆನಪಿಸುವಂತಿದೆ, ಮತ್ತು ಈ ಕುರಿತಂತೆ ಹವಾಮಾನ ಇಲಾಖೆಯು, ಶನಿವಾರದವರೆಗೂ ತಮಿಳುನಾಡಿನ ಉತ್ತರ ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿದೆ.

ಅದಲ್ಲದೇ ಮುಂಬರುವ 24 ಗಂಟೆಗಳಲ್ಲಿ ಕಾಂಚೀಪುರಂ ಮತ್ತು  ತಿರುವಳ್ಳುರ್ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗುವುದಿಂದ ಎಚ್ಚರಿಕೆಯಿಂದಿರಲು ಸೂಚಿಸಿದೆ. ನಿನ್ನೆ ಮಧ್ಯಾಹ್ನದವರೆಗೂ ಅಲ್ಪ ಪ್ರಮಾಣದಲ್ಲಿ ಸುರಿಯುತ್ತಿದ್ದ ಮಳೆ, ರಾತ್ರಿಯಾಗುತ್ತಿದ್ದಂತೆ ಮಳೆಯ ಭೀಕರತೆ ಹೆಚ್ಚಾಗಿದೆ. ಇದರಿಂದ ರೈಲು ಸಂಚಾರಕ್ಕೂ ತೊಡಕಾಗಿದೆ.

ಮಳೆ ಹೆಚ್ಚಾಗುತ್ತಿದ್ದಂತೆ ವಾಹನ ದಟ್ಟಣೆಯು ಅಧಿಕವಾಗಿದ್ದು, ವಾಹನ ಸವಾರರು ಮಳೆಯಲ್ಲಿ ಮುಂದಕ್ಕೂ ಹೊಗಲಾಗದೆ ಮಳೆಯಲ್ಲೇ ನಿಂತು ನೆನೆದು ತೊಪ್ಪೆಯಾದರು. ಈ ದಿಢೀರ್ ಭಾರೀ ಮಳೆಗೆ ಜನ ತತ್ತರಿಸಿದ್ದಾರೆ. ವಿಮಾನಯಾನಕ್ಕೆ ಯಾವುದೇ ಅಡಚಣೆಯಾಗಿಲ್ಲವೆಂದು ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಾರೆ ನಿನ್ನೆ ರಾತ್ರಿ ಸುರಿದ ಮಳೆಗೆ ಚೆನ್ನೈ ಮತ್ತೆ ಬೆಚ್ಚಿಬಿದ್ದಿದೆ.

 

 


ಸಂಬಂಧಿತ ಟ್ಯಾಗ್ಗಳು

Kannada News Karnataka ಕಾಂಚೀಪುರಂ ತಿರುವಳ್ಳುರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ