ಕಸದಿಂದ ಕಾರುಗಳು ಭಸ್ಮ..

Kannada News

03-11-2017

ಬೆಳಗಾವಿ: ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ 1 ಟಾಟಾ ಏಸ್, 2 ಕಾರುಗಳು ಧಗಧಗನೆ ಹೊತ್ತಿ ಉರಿದು ಸುಟ್ಟು ಕರಕಲಾದ ಘಟನೆಯು ಬೆಳಗಾವಿಯ ಗಾಂಧಿನಗರದಲ್ಲಿ ನಡೆದಿದೆ.

ನಗರದ ಹಳೇ ಗಾಂಧಿನಗರದ ರಸ್ತೆ ಪಕ್ಕದಲ್ಲಿ ಒಂದು ಟಾಟಾ ಏಸ್ ಮತ್ತು ಎರಡು ಕಾರುಗಳು ನಿಂತಿದ್ದವು. ಇನ್ನು ಅದೇ ರಸ್ತೆಯ ಪಕ್ಕದಲ್ಲಿಯೇ ಕಸದ ರಾಶಿ ಇದ್ದಿದ್ದರಿಂದ, ಮುಂಜಾನೆ 5.30 ಕ್ಕೆ ಆಕಸ್ಮಿಕವಾಗಿ ಕಸಕ್ಕೆ ಬೆಂಕಿ ಹತ್ತಿಕೊಂಡಿದೆ. ಇದರ ಪರಿಣಾಮ ಪಕ್ಕದಲ್ಲಿದ್ದ ಕಾರುಗಳಿಗೂ ಬೆಂಕಿ ವ್ಯಾಪಿಸಿ, ಕಾರುಗಳು ಸುಟ್ಟು ಕರಕಲಾಗಿವೆ. 

ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ನೀರು ತಂದು ಸುರಿದು ಬೆಂಕಿಯನ್ನು ನಂದಿಸಿದ್ದಾರೆ. ಅಲ್ಲೇ ಪಕ್ಕದಲ್ಲಿ ಗ್ಯಾಸ್ ಮತ್ತು ಪೆಟ್ರೋಲ್ ಬಂಕ್ ಇದ್ದುದ್ದರಿಂದ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಭಾರೀ ಅನಾಹುವೊಂದು ತಪ್ಪಿದಂತಾಗಿದೆ. ಈ ಅವಘಡ ಸಂಭವಿಸಿದಾಗ ಜನರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಇನ್ನು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ಟಾಟಾ ಏಸ್ ಕಸದ ರಾಶಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ