ತುಮಕೂರಿನಲ್ಲಿಂದು ಬಿಜೆಪಿ ರಥ..

Kannada News

03-11-2017

ತುಮಕೂರು: ಬಿಜೆಪಿಯ 'ನವಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ'ಗೆ ಇಂದು 2ನೇ ದಿನ. ಇಂದು ತುಮಕೂರು ಜಿಲ್ಲೆಯ ತುರುವೇಕೆರೆ ಚಿಕ್ಕನಾಯಕನಹಳ್ಳಿಯ, ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಗಳಲ್ಲಿ ಪರಿವರ್ತನಾ ಯಾತ್ರೆ ಸಂಚರಿಸಲಿದೆ.

ಕಳೆದ ರಾತ್ರಿ ಬಿ.ಎಸ್.ಯಡಿಯೂರಪ್ಪ ಮತ್ತವರ ತಂಡ ಯಡಿಯೂರು ಕ್ಷೇತ್ರದಲ್ಲಿ ವಾಸ್ತವ್ಯ ಹೂಡಿತ್ತು. ಇಂದು ಬೆಳಗ್ಗೆ ಯಡಿಯೂರು ಕ್ಷೇತ್ರದಲ್ಲಿ ಸಿದ್ದಲಿಂಗೇಶ್ವ ದೇವಾಲಯದಲ್ಲಿ ಯಡಿಯೂರಪ್ಪ ವಿಶೇಷ ಪೂಜೆ ಸಲ್ಲಿಸಿ, ನಂತರ ಬೆಳಗಿನ ಉಪಹಾರದ ಜೊತೆ ತುಮಕೂರು ಜಿಲ್ಲೆಯ ಮುಖಂಡರೊಂದಿಗೆ ಔಪಚಾರಿಕ ಸಭೆ ನಡೆಸಿದರು. ಬಳಿಕ  ಬಿಜೆಪಿ ರಥದಲ್ಲಿ ಯಡಿಯೂರಿನಿಂದ ತುರುವೇಕೆರೆಗೆ ತೆರಳಿದರು.

ಮಧ್ಯಾಹ್ನ 3 ಗಂಟೆಗೆ ಚಿಕ್ಕನಾಯಕನ ಹಳ್ಳಿಯಲ್ಲಿ ಯಾತ್ರೆ ಕೈಗೊಂಡು ಸಂಜೆ 6 ಗಂಟೆ ವೇಳೆಗೆ ತುಮಕೂರು ಗ್ರಾಮಾಂತರಕ್ಕೆ ತಲುಪಲಿದ್ದಾರೆ, ಹಾಗೂ ಇಂದು ರಾತ್ರಿ ತುಮಕೂರಿನಲ್ಲೇ ಬಿಎಸ್ ವೈ ವಾಸ್ತವ್ಯ ಹೂಡಲಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ಗ್ರಾಮಾಂತರ ಔಪಚಾರಿಕ ಸಭೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ