ಅಮೆರಿಕದ ‘ಅಕ್ಕ’ಗೆ ನೂತನ ಪದಾಧಿಕಾರಿಗಳು

Kannada News

02-11-2017

ಅಕ್ಕ ಎಂದು ಕರೆಯಲ್ಪಡುವ ಅಮೆರಿಕ ಕನ್ನಡ ಕೂಟಗಳ ಆಗರಕ್ಕೆ 2017-2018ನೇ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಚೇರ್‌ಮನ್ ಆಗಿ ಅಮರ್‌ ನಾಥ್ ಗೌಡರು ಮತ್ತು ಅಕ್ಕಾದ ಹೊಸ ಅಧ್ಯಕ್ಷರಾಗಿ ಶಿವಮೂರ್ತಿ ಕೀಲಾರ ಅವರು ಆಯ್ಕೆಯಾಗಿದ್ದಾರೆ. ಧನಂಜಯ ಕೆಂಗಯ್ಯ, ರಮೇಶ್ ಅಪ್ಪಾರೆಡ್ಡಿ ಮತ್ತು ಶಶಿಧರ್, ಅಕ್ಕಾ ಸಂಸ್ಥೆಯ ಉಪಾಧ್ಯಕ್ಷರುಗಳಾಗಿದ್ದಾರೆ. ಡಾ.ನವೀನ್ ಕೃಷ್ಣ ಅವರು ಕಾರ್ಯದರ್ಶಿಯಾಗಿ ಮತ್ತು ತುಮಕೂರು ದಯಾನಂದ್ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ. ರೇಣುಕಾ ಪ್ರಸಾದ್ ಹಾಗೂ ರೂಪಶ್ರೀ ಮೇಲುಕೋಟೆ ಜಂಟಿ ಕಾರ್ಯದರ್ಶಿಗಳಾಗಿ ಆಯ್ಕೆಯಾದರೆ, ಡಾ.ಲತಾ ನಟರಾಜ್ ಮತ್ತು ಸುರೇಶ್ ಕೃಷ್ಣಯ್ಯ ಅವರು ಈ ಸಾಲಿನ  ಜಂಟಿ ಖಜಾಂಜಿಗಳಾಗಿದ್ದಾರೆ.

ಅಕ್ಕದ ಪದಾಧಿಕಾರಿಗಳು ಮತ್ತು ಸದಸ್ಯರು, 62ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಎಲ್ಲ ಕನ್ನಡಿಗರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಇದೇ ವೇಳೆ, 2018ರ ಆಗಸ್ಟ್ 31ರಿಂದ ಸೆಪ್ಟಂಬರ್ 2ರ ವರೆಗೆ 10ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಅಮೆರಿಕದ ಡಲ್ಲಾಸ್ ನಗರದಲ್ಲಿ ನಡೆಯಲಿದೆ ಎಂದು ಅಕ್ಕ ಸಂಸ್ಥೆ ತಿಳಿಸಿದೆ.

ಅಮೆರಿಕದ ಅರಿಜೋನಾದಲ್ಲಿ 1998ರಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಅಕ್ಕಾ(AKKA) ಅಥವ ಅಸೋಸಿಯೇಷನ್ ಆಫ್ ಕನ್ನಡ ಕೂಟಾಸ್ ಆಫ್ ಅಮೆರಿಕ ಸ್ಥಾಪನೆಯಾಯಿತು. ಉತ್ತರ ಅಮೆರಿಕದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಪ್ರಚಾರಕ್ಕಾಗಿ ಹಾಗೂ ಅಲ್ಲಿನ ಕನ್ನಡಿಗರು ಮತ್ತು ವಿವಿಧ ಕನ್ನಡ ಸಂಸ್ಥೆಗಳ ನಡುವೆ ಸಮಗ್ರತೆ, ಸಮನ್ವಯ ಸಾಧನೆಯ ಉದ್ದೇಶದಿಂದ ಅಕ್ಕ ಸಂಸ್ಥೆ ಸ್ಥಾಪನೆ ಮಾಡಲಾಯಿತು. ಅಕ್ಕ ಸಂಸ್ಥೆ, ಅನಿವಾಸಿ ಭಾರತೀಯ ಕನ್ನಡಿಗರು ಮತ್ತು ಕರ್ನಾಟದಲ್ಲಿನ ಕನ್ನಡಿಗರ ನಡುವಿನ ಸಂಪರ್ಕಕ್ಕೆ ಒಂದು ವೇದಿಕೆಯಾಗಿ ಹೆಸರು ಮಾಡಿದೆ.

 


ಸಂಬಂಧಿತ ಟ್ಯಾಗ್ಗಳು

Kannada News Karnataka AKKA ಉತ್ತರ ಅಮೆರಿಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ