ಜೆಡಿಎಸ್ ಮೇಲುಗೈ..?

Kannada News

02-11-2017

ಕರ್ನಾಟಕದಲ್ಲಿ ಮುಂದಿನ ಸರ್ಕಾರ ಜೆಡಿಎಸ್‌ ನವರದ್ದಾಗಿರುತ್ತದೆಯೇ..? ಇಂಥದ್ದೊಂದು ಪ್ರಶ್ನೆಗೆ ಉತ್ತರ ಕಂಡುಹಿಡಿಯುವ ಸಲುವಾಗಿ ಹಲವು ಅನೌಪಚಾರಿಕ ಸಮೀಕ್ಷೆಗಳು ನಡೆದಿವೆ. ಸೂಪರ್ ಸುದ್ದಿಯೂ ಸೇರಿದಂತೆ ಹಲವು ಸಂಸ್ಥೆಗಳು ನಡೆಸಿದ ಎಲ್ಲಾ ಸಮೀಕ್ಷೆಗಳನ್ನು ಗಮನಿಸುವುದಾದರೆ, ಈ ಬಾರಿ ರಾಜ್ಯದ ಜನರು, ಜೆಡಿಎಸ್‌ ಬಗ್ಗೆ ಹೆಚ್ಚಿನ ಒಲವು ವ್ಯಕ್ತಪಡಿಸುತ್ತಿರುವುದು ಕಂಡುಬಂದಿದೆ.

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ನಿಮ್ಮ ಆಯ್ಕೆ ಯಾರು..? ಎಂಬ ಪ್ರಶ್ನೆಗೆ ಸುಮಾರು ಶೇಕಡ 60ರಷ್ಟು ಜನರು ಹೆಚ್‌.ಡಿ.ಕುಮಾರ ಸ್ವಾಮಿ ಪರ ತಮ್ಮ ಮತ ಚಲಾಯಿಸಿದ್ದಾರೆ. ಹಾಲಿ ಸಿಎಂ ಸಿದ್ದರಾಮಯ್ಯ ಮತ್ತು ಬಿ.ಎಸ್‌.ಯಡಿಯೂರಪ್ಪನವರು, ಕುಮಾರಸ್ವಾಮಿ ಅವರಿಗಿಂತಲೂ ತುಂಬಾ ಹಿಂದೆ ಇದ್ದಾರೆ. ಇತ್ತೀಚಿನ ದಿನಗಳಲ್ಲಿ ಹೆಚ್‌.ಡಿ.ದೇವೇಗೌಡರು ಭರವಸೆ ವ್ಯಕ್ತಪಡಿಸುತ್ತಿರುವ ರೀತಿಯಲ್ಲೇ, ಜೆಡಿಎಸ್ ಮೇಲುಗೈ ಪಡೆಯುತ್ತಿರುವಂತೆ ಕಂಡುಬರುತ್ತಿದೆ.

ಮುಂದಿನ ಮುಖ್ಯಮಂತ್ರಿ ಯಾರು..? ಅಥವ ಮುಂದಿನ ಸರ್ಕಾರ ಯಾರದು..?  ಎಂಬ ಸಮೀಕ್ಷೆಗಳಲ್ಲಿ ಪಾಲ್ಗೊಂಡವರಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಿಗೆ ಇರಬಹುದು, ತಳಮಟ್ಟದವರು ಈ ರೀತಿ ಸಮೀಕ್ಷೆಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆಯೇ ಇರಬಹುದು. ಹೀಗಿದ್ದರೂ ಕೂಡ, ಈ ಎಲ್ಲಾ ಸಮೀಕ್ಷೆಗಳು ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ ಮೇಲುಗೈ ಪಡೆಯುವ ಸಾಧ್ಯತೆಗಳನ್ನು ತೋರಿಸುತ್ತಿರುವುದಂತೂ ಸತ್ಯ.


ಸಂಬಂಧಿತ ಟ್ಯಾಗ್ಗಳು

Kannada News Karnataka ಜೆಡಿಎಸ್‌ ಸಮೀಕ್ಷೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ