‘ಪಶ್ಚಾತ್ತಾಪ ರ‍್ಯಾಲಿ’ ರಾಮಲಿಂಗಾರೆಡ್ಡಿ ವ್ಯಂಗ್ಯ !

Kannada News

02-11-2017

ಬೆಂಗಳೂರು: ಬಿಜೆಪಿ ಇಂದಿನಿಂದ ಹಮ್ಮಿಕೊಂಡಿರುವ ಪರಿವರ್ತನಾ ರ‍್ಯಾಲಿಯನ್ನು ಪಶ್ಚಾತ್ತಾಪ ರ‍್ಯಾಲಿ ಎಂದು ಹೆಸರು ಬದಲಾವಣೆ ಮಾಡಿಕೊಳ್ಳುವುದು ಸೂಕ್ತ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ  ವ್ಯಂಗ್ಯವಾಡಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿವರ್ತನಾ ರ‍್ಯಾಲಿಯನ್ನು ಪಶ್ಚಾತ್ತಾಪ ರ‍್ಯಾಲಿ ಎಂದು ಹೆಸರು ಬದಲಾವಣೆ ಮಾಡಿಕೊಂಡು ಜನರ ಬಳಿಗೆ ಹೋಗಿ ಕ್ಷಮೆ ಕೇಳಿದರೆ ಒಳ್ಳೆಯದು ಎಂದು ಲೇವಡಿ ಮಾಡಿದರು.

2008ರಲ್ಲಿ ಬಿಜೆಪಿಗೆ ಜನರು ಅಧಿಕಾರ ನೀಡಿದರು. ಇವರು ಸರಿಯಾಗಿ ಆಡಳಿತ ಮಾಡಲಿಲ್ಲ ಮೂರು ಜನ ಮುಖ್ಯಮಂತ್ರಿಗಳು ಬದಲಾವಣೆಯಾದರು. ಸಾಲು ಸಾಲಾಗಿ ಜೈಲಿಗೆ ಹೋಗಿ ಬಂದರು, ಅವರು ಮಾಡಿದ ಹಗರಣಗಳನ್ನು ನನ್ನ ಬಾಯಿಂದ ಹೇಳಲು ಮನಸ್ಸು ಬರುತ್ತಿಲ್ಲ, ಭ್ರಷ್ಟಾಚಾರದ ಬಗ್ಗೆಯೂ ಹೇಳುವಂತಿಲ್ಲ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿತ್ತು ಎಂದರು.

ಇತ್ತೀಚೆಗೆ ಗುಜರಾತ್ ನಿಂದ ರಾಜ್ಯಸಭೆ ಸ್ಥಾನದ ಚುನಾವಣಾ ಸಂದರ್ಭದಲ್ಲಿ, ಅಲ್ಲಿನ ಕಾಂಗ್ರೆಸ್ ಎಂಎಲ್‍ಎಗಳನ್ನು ಬೆಂಗಳೂರಿಗೆ ಕರೆತಂದಾಗ ಬಿಜೆಪಿಯವರು ಬೊಬ್ಬೆ ಹಾಕಿದರು. ಇವರ ಆಡಳಿತದಲ್ಲಿ ಅದೆಷ್ಟು ಬಾರಿ ರೆಸಾರ್ಟ್ ಯಾತ್ರೆ ಮಾಡಿದ್ದಾರೆ ಎಂಬುದನ್ನು ನೆನಪಿಸಿಕೊಳ್ಳಲಿ ಎಂದು ಹೇಳಿದರು.


ಸಂಬಂಧಿತ ಟ್ಯಾಗ್ಗಳು

Kannada News Karnataka ಗೃಹ ಸಚಿವ ಭ್ರಷ್ಟಾಚಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ