ಹಣಕ್ಕಾಗಿ ಬಿತ್ತು ಹೆಣ..

Kannada News

02-11-2017

ಬೆಂಗಳೂರು: ಹಣಕಾಸಿನ ವಿಚಾರಕ್ಕೆ ಉಂಟಾದ ಜಗಳದಲ್ಲಿ, ಅತ್ತಿಗೆಯನ್ನೇ ಕತ್ತು ಕುಯ್ದು ಕೊಲೆಗೈದ ಮೈದುನ ರಾಜಗೋಪಾಲನಗರ ಪೊಲೀಸರ ಅತಿಥಿಯಾಗಿದ್ದಾನೆ. ರಾಜಗೋಪಾಲನಗರದ, ಗಣಪತಿನಗರದ ನಿವಾಸಿ, ಸರೋಜಾ(38) ಎಂಬ ಮಹಿಳೆಯ ಕತ್ತು ಕುಯ್ದು ಕೊಲೆಗೈದು ಪರಾರಿಯಾಗಿದ್ದ, ಮೈದುನ ನಟರಾಜ್(45)ನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.

ಗಣಪತಿನಗರದಲ್ಲಿ ಲೇತ್ ಮಿಷಿನ್ ಕಾರ್ಖಾನೆ ನಡೆಸುತ್ತಿದ್ದ ಆರೋಪಿ ನಟರಾಜ್, ಅಣ್ಣನ ಅಕಾಲಿಕ ಸಾವಿನ ನಂತರ ಅವರ ಪತ್ನಿ ಸರೋಜಾಳೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದನು. ಗಾರ್ಮೆಂಟ್ಸ್ ನಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಸರೋಜಾ ಬೇರೆ ಕಡೆ ವಾಸಿಸುತ್ತಿದ್ದು, ಆಗಾಗ ಆಕೆಯ ಮನೆಗೆ ಹೋಗಿಬರುತ್ತಿದ್ದ ನಟರಾಜ್ ಲಕ್ಷಾಂತರ ರೂಗಳ ಹಣವನ್ನು ಸಾಲವಾಗಿ ನೀಡಿದ್ದನು ಎನ್ನಲಾಗಿದ್ದು, ಸಾಲದ ಹಣ ಹಿಂತಿರುಗಿಸಲು ಸರೋಜಾ ಮಾಡುತ್ತಿದ್ದರಿಂದ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು.

ಕಳೆದ ಸೋಮವಾರ ಮಧ್ಯರಾತ್ರಿ ಸರೋಜಾರ ಮನೆಗೆ ಬಂದಿದ್ದ ನಟರಾಜ್, ಹಣಕಾಸಿನ ವಿಚಾರವಾಗಿ ಜಗಳ ತೆಗೆದ ಹೋಗಿದ್ದ, ಅಲ್ಲದೇ ಸರೋಜ ಅವರ ಪುತ್ರ ನವೀನ್ ಕೆಲಸಕ್ಕೆ ಹೋಗಿದ್ದಾಗ, ಮಾರನೇ ದಿನ ಬೆಳಿಗ್ಗೆ ಆಕ್ರೋಶದಿಂದ ಕುದಿಯುತ್ತಾ ಮನೆಗೆ ಬಂದು, ಸರೋಜಾರ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದನು. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ರಾಜಗೋಪಾಲನಗರ ಪೊಲೀಸರು ಆರೋಪಿ ನಟರಾಜನನ್ನು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ