ಐಟಿ ದಾಳಿ: ಬ್ರಿಗೇಡ್ ಕಚೇರಿಗಳ ಶೋಧ !

Kannada News

02-11-2017

ಮೈಸೂರು: ಮೈಸೂರಿನ ವಿವಿ ಮೊಹಲ್ಲಾದಲ್ಲಿರುವ ಬ್ರಿಗೇಡ್ ಎಂಟರ್‍ಪ್ರೈಸಸ್ ಮತ್ತು ಬ್ರಿಗೇಡ್ ಪಾಯಿಂಟ್ಸ್ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ(ಐಟಿ) ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆ, ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಗರಿಷ್ಠ ಮೊತ್ತದ ನೋಟು ಬ್ಯಾನ್ ಸಂದರ್ಭ, ಭಾರೀ ಮೊತ್ತದ ಹಣವನ್ನು ಇಲ್ಲಿನ ವಾಸವಿ ಸಹಕಾರ ಬ್ಯಾಂಕ್‍ ನಲ್ಲಿ ಠೇವಣಿ ಮಾಡಿ ನಂತರ ವಾಪಸ್ ಪಡೆದು ಗರಿಷ್ಠ ಪ್ರಮಾಣದ ವಹಿವಾಟು ನಡೆಸಿದ ವಿಷಯ ಬೆಳಕಿಗೆ ಬಂದ ನಂತರ ಐಟಿ ಅಧಿಕಾರಿಗಳು, ಇಂದು ದಾಳಿ ನಡೆಸಿದ್ದಾರೆ.

ಬೆಳಿಗ್ಗೆಯೇ ಮೂರ್ನಾಲ್ಕು ವಾಹನಗಳಲ್ಲಿ ಬಂದಿಳಿದ ಗೋವಾ ಮೂಲದ ಸುಮಾರು 15-20 ಅಧಿಕಾರಿಗಳು, ಜಯಲಕ್ಷ್ಮಿಪುರಂ ಪೊಲೀಸರ ನೆರವಿನೊಂದಿಗೆ ಬ್ರಿಗೇಡ್ ಪಾಯಿಂಟ್ಸ್ ಕಚೇರಿಗಳಲ್ಲಿ ತಪಾಸಣೆ ನಡೆಸಿ ವಿವಿಧ ದಾಖಲೆಗಳು, ಲ್ಯಾಪ್ ಟಾಪ್‍ಗಳು, ಹಾರ್ಡ್ ಡಿಸ್ಕ್ ಮುಂತಾದವುಗಳನ್ನು ಸ್ವಾಧೀನಕ್ಕೆ ತೆಗೆದುಕೊಂಡಿದ್ದು, ಪರಿಶೀಲನೆ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ