ಎರಡು ಬೈಕ್ ಮುಖಾಮುಖಿ ಡಿಕ್ಕಿ !

Kannada News

02-11-2017

ಹಾಸನ: ಎರಡು ಬೈಕ್‍ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಬೈಕ್‌ ಸವಾರ ಮೃತಪಟ್ಟಿರುವ ಘಟನೆಯು ಹಾಸನದಲ್ಲಿ ನಡೆದಿದೆ. ಹಾಸನ ತಾಲ್ಲೂಕಿನ ಹಳೇಬೀಡು ಹೋಬಳಿಯ ಕಲ್ಲಳ್ಳಿ ಅರಣ್ಯ ಸಮೀಪ, ಈ ಅಪಘಾತವಾಗಿದೆ. ಮಲ್ಲನಹಳ್ಳಿಯ ಮಹೇಶ್(35) ಎಂಬಾತ ಸ್ಥಳದಲ್ಲೇ ಸಾವನಪ್ಪಿದ್ದು, ಮತ್ತೊಂದು ಬೈಕ್ ಸವಾರ ಜಯಣ್ಣನ ಸ್ಥಿತಿ ಚಿಂತಾಜನಕವಾಗಿದೆ.

ಹಳೇಬೀಡು ತಾಲ್ಲೂಕಿನ ಕಲ್ಲಳ್ಳಿ ಅರಣ್ಯ ಪ್ರದೇಶದಲ್ಲಿ ವೇಗವಾಗಿ ಬಂದ ಇಬ್ಬರು ಬೈಕ್ ಸವಾರರು ಮುಖಾ-ಮುಖಿ ಡಿಕ್ಕಿಯಾಗಿದ್ದಾರೆ. ಅಪಘಾತದ ಭೀಕರತೆಗೆ ಬೈಕ್ ಸವಾರನಾದ ಮಹೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನು ತೀವ್ರ ಗಾಯಗಳಿಂದ ನರಳುತ್ತಿದ್ದ ಇನ್ನೊಬ್ಬ ಬೈಕ್ ಸವಾರ ಜಯಣ್ಣ ಅವರನ್ನು  ಸ್ಥಳೀಯ ಆಸ್ಪತ್ರಗೆ ದಾಖಲಿಸಲಾಗಿದೆ. ಈತ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಪ್ರಕರಣ ಬೇಲೂರು ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Muchas gracias. ?Como puedo iniciar sesion?
  • korjtwtkfb
  • vryobwjcnq