ನೈಜೀರಿಯನ್ ಪ್ರಜೆ ಬಂಧನ: ಕೊಕೇನ್ ವಶ

Kannada News

02-11-2017

ಬೆಂಗಳೂರು: ಕೊಕೇನ್ ಮಾರಾಟ ಮಾಡುತ್ತಿದ್ದ ಓರ್ವ ನೈಜೀರಿಯನ್ ಸೇರಿ ಇಬ್ಬರನ್ನು ಬಂಧಿಸಿರುವ ಜೆಪಿ ನಗರ ಪೊಲೀಸರು ಫಾರ್ಚುನರ್ ಕಾರು, ಹೋಂಡಾ ಆಕ್ಟಿವಾ ಸ್ಕೂಟರ್, 4 ಮೊಬೈಲ್‍ಗಳು, ಕೊಕೇನ್ ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ನೈಜೀರಿಯಾದ ಅಚ್ಯುನಿಕ್ ನವಫೋರ್ (30) ಹಾಗೂ ಲಾಲ್‍ ಬಾಗ್ ಫೋರ್ಟ್ ರಸ್ತೆಯ ಸೈಯದ್ ಹಫೀಫ್ (27) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 605 ಗ್ರಾಂ ಕೊಕೇನ್, 4 ಮೊಬೈಲ್‍ಗಳು, ಫಾರ್ಚುನರ್ ಕಾರು, ಹೋಂಡಾ ಆಕ್ಟಿವಾ ಸೇರಿದಂತೆ ಲಕ್ಷಾಂತರ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಡಾ.ಎಸ್.ಡಿ ಶರಣಪ್ಪ ತಿಳಿಸಿದ್ದಾರೆ.

ಆರೋಪಿ ಅಚ್ಯುನಿಕ್ ವೀಸಾ ನಿಯಮಗಳನ್ನು ಉಲ್ಲಂಘಿಸಿ, ಹೊರಮಾವುವಿನ ಗಣಪತಿ ಬಡಾವಣೆಯಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದು, ಸುಳ್ಳು ನಕಲಿ ದಾಖಲಾತಿಗಳೊಂದಿಗೆ ಬೇರೊಬ್ಬರ ಹೆಸರಿನಲ್ಲಿ ಸಿಮ್‍ಗಳನ್ನು ಪಡೆದು, ಹಫೀಫ್ ಜೊತೆ ಸೇರಿ  ಕೊಕೇನ್ ಮಾರಾಟದಲ್ಲಿ ತೊಡಗಿರುವುದು ವಿಚಾರಣೆಯಲ್ಲಿ ತಿಳಿದು ಬಂದಿದೆ. ಜಯನಗರದ ಮೊದಲನೇ ಹಂತದ ಸಾರಕ್ಕಿ ಕ್ರೀಡಾಂಗಣದ ಬಳಿ ಕೊಕೇನ್ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಜೆಪಿ ನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ನೈಜೀರಿಯನ್ ವೀಸಾ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ