ನಿಧಿಗಾಗಿ ಬಾಲಕನನ್ನು ಬಲಿಕೊಟ್ಟಿದ್ರಾ..?

Kannada News

02-11-2017

ವಿಜಯಪುರ: ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಬಳಗಾನೂರ ಗ್ರಾಮದ ಹೊರ ವಲಯದ ಬಾವಿಯೊಂದರಲ್ಲಿ ಗಂಡು ಮಗುವಿನ ಶವ ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ. ಗಂಗಾಧರ ರಮೇಶ ಹಡಪದ (2) ಶವವಾಗಿ ಪತ್ತೆಯಾಗಿರುವ ಬಾಲಕ. ಕಳೆದ ಎರಡು‌ ದಿನಗಳ ಹಿಂದೆ ಕಾಣೆಯಾಗಿದ್ದ ಬಾಲಕನಿಗೆ ಪೋಷಕರು ಹುಡುಕಾಟ ನಡೆಸಿದ್ದರು. ನಿಧಿಯಾಸೆಗೆ ಬಾಲಕನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆಲಮೇಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ಹುಡುಕಾಟ ನಿಧಿನಿಧಿಗಾಗಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ