ಲೂಸ್ ಮಾದ ವೆಡ್ಸ್ ಸಾಹಿತ್ಯ...

Kannada News

02-11-2017

ಬೆಂಗಳೂರು: ಸ್ಯಾಂಡಲ್​ವುಡ್​ ನಟ, ಲೂಸ್​ ಮಾದ ಯೋಗೇಶ್​ ತಮ್ಮ ಬಾಲ್ಯದ ಗೆಳತಿ ಸಾಹಿತ್ಯ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೋಣನ ಕುಂಟೆಯಲ್ಲಿರುವ ಶ್ರೀ ಕನ್ವೆಂಷನ್​ ಹಾಲ್​ನಲ್ಲಿ ಗುರುವಾರ ಬೆಳಗ್ಗೆ 6 ಗಂಟೆಯ ಶುಭ ಮುಹೂರ್ತದಲ್ಲಿ ನಟ ಯೋಗಿ ವಿವಾಹ ಬಂಧನಕ್ಕೆ ಒಳಗಾದರು. ಕುರುಬ ಸಂಪ್ರದಾಯದಂತೆ ಯೋಗಿ ಮದುವೆ ಸಂಪ್ರದಾಯಬದ್ಧವಾಗಿ ನೆರವೇರಿತು. ಈ ಸಂದರ್ಭದಲ್ಲಿ ಎರಡೂ ಕುಟುಂಬದವರು ಮತ್ತು ಬಂಧು ಮಿತ್ರರು ಮಾತ್ರ ಹಾಜರಿದ್ದರು. ಹಿರಿಯ ನಟ ಶಿವರಾಜ್​ ಕುಮಾರ್​ ಅವರು ನವದಂಪತಿಗಳಿಗೆ ಶುಭ ಹಾರೈಸಿದರು.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ