‘ನಿವೃತ್ತಿ ನಂತರ ಕರ್ನಾಟಕದಲ್ಲೇ ವಾಸ’

Kannada News

31-10-2017

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಸುಧೀರ್ಘ ಕಾಲ ಸೇವೆ ಸಲ್ಲಿಸಿರುವುದು ನನಗೆ ತೃಪ್ತಿ ತಂದಿದೆ ಎಂದು ಇಂದು ಸೇವೆಯಿಂದ ನಿವೃತ್ತರಾಗಲಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕ ರೂಪಕ್ ಕುಮಾರ್ ದತ್ತಾ ಅವರು ತಿಳಿಸಿದ್ದಾರೆ. ಕೋರಮಂಗಲದ ಕೆ.ಎಸ್‍.ಆರ್.ಪಿ ಕವಾಯುತ ಮೈದಾನದಲ್ಲಿ ಇಂದು ನಡೆದ ಬೀಳ್ಕೋಡುಗೆ ಕವಾಯತುವಿನಲ್ಲಿ ಪಾಲ್ಗೊಂಡು, ಪೊಲೀಸ್ ಪಡೆಗಳ ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯಲ್ಲಿ ಸುಧೀರ್ಘ ಕಾಲದ ಸೇವೆ ನನಗೆ ತೃಪ್ತಿ ತಂದಿದೆ ಎಂದರು.

ಕೇಂದ್ರ ಸೇವೆಯಲ್ಲಿದ್ದ ನನಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕನಾಗುವ ಆಸೆ ಇರಲಿಲ್ಲ. ಆದರೂ ನನಗೆ ಡಿಜಿ ಮತ್ತು ಐಜಿಪಿಯಾಗಿ ಕಾರ್ಯನಿರ್ವಹಿಸುವ ಅವಕಾಶ ದೊರೆಯಿತು ಕಡಿಮೆ ಅವಧಿಯಲ್ಲೇ ಉತ್ತಮ ಸೇವೆ ಸಲ್ಲಿಸಿದ್ದೇನೆ ಎಂದು ತಿಳಿಸಿದರು. ಕರ್ನಾಟಕ ಆಡಳಿತ ವ್ಯವಸ್ಥೆ ಮತ್ತು ಪೊಲೀಸ್ ಇಲಾಖೆ ಉತ್ತಮ ಸ್ಥಾನದಲ್ಲಿದೆ, ಕರ್ನಾಟಕದ ಜೊತೆಗೆ ನನಗೆ ಪೂರ್ವಜನ್ಮದ ಸಂಬಂಧವಿದೆ. ಬೆಂಗಳೂರಿನಲ್ಲಿ ನನಗೆ ಮನೆಯಿದ್ದು, ನಿವೃತ್ತಿಯ ನಂತರ ಕರ್ನಾಟಕದಲ್ಲೇ ವಾಸ ಮಾಡುವೆ ಎಂದು ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ