ಬ್ಲ್ಯಾಕ್ ಪಲ್ಸರ್ ಮತ್ತು ಚಿನ್ನದ ಸರ !

Kannada News

31-10-2017

ಬೆಂಗಳೂರು: ಬ್ಲಾಕ್ ಪಲ್ಸರ್ ಬೈಕ್‍ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಇಂದು ಮುಂಜಾನೆ ಜೆಪಿ ನಗರದ ಎರಡು ಕಡೆಗಳಲ್ಲಿ ಇಬ್ಬರು ಮಹಿಳೆಯರ ಮಾಂಗಲ್ಯ ಸರವನ್ನು ಕಸಿದು ಪರಾರಿಯಾಗಿದ್ದಾರೆ.

ಜೆಪಿನಗರದ 2ನೇ ಹಂತದ 5ನೇ ಕ್ರಾಸ್‍ ನಲ್ಲಿ ಬೆಳಿಗ್ಗೆ 6.15ರ ವೇಳೆ ಹಾಲು ತೆಗೆದುಕೊಂಡು ಮನೆಗೆ ಹೋಗುತ್ತಿದ್ದ ಜಯಲಕ್ಷ್ಮಮ್ಮ ಅವರ ಕತ್ತಿನಲ್ಲಿದ್ದ 25 ಗ್ರಾಂ ತೂಕದ ಮಾಂಗಲ್ಯ ಸರವನ್ನು ಹಿಂದಿನಿಂದ ಕಪ್ಪು ಬಣ್ಣದ ಪಲ್ಸರ್ ಬೈಕ್‍ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಸಿದು ಪರಾರಿಯಾಗಿದ್ದಾರೆ.

ಇದಾದ ಕೆಲವೇ ನಿಮಿಷದಲ್ಲಿ ಪಕ್ಕದ ರಸ್ತೆಗೆ ಹೋದ ದುಷ್ಕರ್ಮಿಗಳು ರಾತ್ರಿ ಉಳಿದಿದ್ದ ಅನ್ನವನ್ನು ಕಸಕ್ಕೆ ಹಾಕಿ ಮನೆಗೆ ಹೋಗುತ್ತಿದ್ದ ಲಕ್ಷ್ಮಮ್ಮ ಎಂಬ ಮಹಿಳೆಯ 50 ಗ್ರಾಂ ಮಾಂಗಲ್ಯ ಸರವನ್ನು ಕಸಿದು ಪರಾರಿಯಾಗಿದ್ದಾರೆ. ಇವೆರಡೂ ಕೃತ್ಯಗಳನ್ನು ಇಬ್ಬರು ದುಷ್ಕರ್ಮಿಗಳು ಮಾಡಿರುವುದು ಹತ್ತಿರದ ಸಿಸಿ ಟಿವಿ ದೃಶ್ಯಾವಳಿಗಳಿಂದ ಪತ್ತೆಯಾಗಿದ್ದು, ಪ್ರಕರಣ ದಾಖಲಿಸಿರುವ ಜೆಪಿನಗರ ಪೊಲೀಸರು ದುಷ್ಕರ್ಮಿಗಳಿಗಾಗಿ ತೀವ್ರಶೋಧ ನಡೆಸಿದ್ದಾರೆ ಎಂದು ಡಿಸಿಪಿ ಡಾ. ಎಸ್.ಡಿ ಶರಣಪ್ಪ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ