'ದೇವರ ದರ್ಶನಕ್ಕೆ ಭಕ್ತಿ ಮುಖ್ಯ, ಆಹಾರ ಅಲ್ಲ'

Kannada News

31-10-2017 289

ಬೆಂಗಳೂರು: ನಟ ಉಪೇಂದ್ರ ಅವರ ನೂತನ ರಾಜಕೀಯ ಪಕ್ಷ ರಚನೆ ವಿಚಾರದ ಕುರಿತು ಕೇಳಲಾದ ಪ್ರಶ್ನೆಗೆ ಸಮಾಜ ಇಲಾಖೆ ಸಚಿವ ಹೆಚ್.ಆಂಜನೇಯ, ಅವರ ಪಕ್ಷ ಸ್ಥಾಪನೆ ಬಗ್ಗೆ ನಾನೇನೂ ಹೇಳಲ್ಲ ಎಂದಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ಯಾರು ಯಾವ ಪಕ್ಷವನ್ನಾದರೂ ಸ್ಥಾಪಿಸಬಹುದು. ಪಕ್ಷದಲ್ಲಿ ಯಾರಿರಬೇಕು ಅನ್ನೋ ತೀರ್ಮಾನ ಮಾಡೋ ಸ್ವಾತಂತ್ರವೂ ಎಲ್ಲರಿಗಿದೆ ಎಂದರು. ಅಲ್ಲದೇ ಯಾವುದೇ ಪಕ್ಷ ಬರಲಿ, ಹೋಗಲಿ ಕಾಂಗ್ರೆಸ್ ಪಕ್ಷ ಯಾವಾಗಲೂ ಇರುತ್ತೆ ಎಂದು ಹೇಳಿದರು.

ಇನ್ನು ದೇವರ ದರ್ಶನಕ್ಕೆ ಭಕ್ತಿ ಮುಖ್ಯ, ಆಹಾರ ಮುಖ್ಯವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಧರ್ಮಸ್ಥಳದ ಭೇಟಿ ಕುರಿತು ಸಮರ್ಥನೆ ನೀಡಿದ್ದಾರೆ. ಇಂಥಹ ವಿಚಾರವನ್ನು ಕೆಲಸವಿಲ್ಲದವರು ಇಲ್ಲಸಲ್ಲದ ವಿಚಾರಗಳ ಬಗ್ಗೆ ಮಾತನಾಡುತ್ತಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು. ನಾನು ಚಿಕ್ಕವರಿರಬೇಕಾದರೆ ಏನಾದರೂ ತಪ್ಪು ಮಾಡಿದರೆ ಮಸೀದಿಗೆ ಕರೆದುಕೊಂಡು ಹೋಗ್ತೇವೆ ಅಂತಾ ಹೇಳುತ್ತಿದ್ರು, ಅಂದರೆ ಮಸೀದಿ ಅಷ್ಟೊಂದು ಪವಿತ್ರ ಕ್ಷೇತ್ರ, ಹಾಗೆಯೇ ಧರ್ಮಸ್ಥಳ ಮಂಜುನಾಥ ಕ್ಷೇತ್ರ ಕೂಡ ಪವಿತ್ರವಾದದ್ದು, ಯಾರೇ ತಪ್ಪು ಮಾಡಿದರೂ ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗೋದಾಗಿ ಹೆದರಿಸುತ್ತಿದ್ದರು. ಅಷ್ಟರಮಟ್ಟಿಗೆ ಪವಿತ್ರ ಕ್ಷೇತ್ರ ಎಂದರು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ