‘ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ’-ಉಪ್ಪಿ

Kannada News

31-10-2017

ಬೆಂಗಳೂರು: ಬೆಂಗಳೂರಿನ ಗಾಂಧಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ನಟ ಉಪೇಂದ್ರ ಹೊಸ ಪಕ್ಷದ ಹೆಸರು ಘೋಷಣೆ ಮಾಡಿದ್ದಾರೆ. ‘ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ’ ಎಂದು ಹೊಸ ಪಕ್ಷದ ಹೆಸರನ್ನು ಘೋಷಿಸಿದ್ದಾರೆ.

ಬಳಿಕ ಮಾತನಾಡಿದ ನಟ ಉಪೇಂದ್ರ, ಎಲ್ಲಾ ಕ್ಷೇತ್ರದಲ್ಲೂ ಬದಲಾವಣೆ ತರಬೇಕಾಗಿದೆ. ನಮ್ಮ ವ್ಯಾಸಾಂಗ ಮತ್ತು ಈಗಿನ ವ್ಯವಸ್ಥೆಯಲ್ಲಿ ವ್ಯತ್ಯಾಸವಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಬೇಕಾಗಿದೆ, ಇದು ನಮ್ಮ ಆಶಯ ಕನಸು ಮತ್ತು ಪ್ರಯತ್ನ ಎಂದು ತಿಳಿಸಿದರು.

ರಾಜಕೀಯಕ್ಕೆ ಹಣಬಲ, ಜಾತಿಬಲ ಬೇಕಿದೆ. ಆದರೆ ನಮ್ಮಲ್ಲಿ ಇದು ಅಗತ್ಯವಿಲ್ಲ. ನಮ್ಮ ಜೊತೆ ಕೈಜೋಡಿಸಿ, ಸ್ಪರ್ಧಿಸಿ ನಿಮ್ಮ ಪರ ಪ್ರಚಾರ ಮಾಡುವ ಜವಾಬ್ದಾರಿ ನನ್ನದು ಎಂದು ಭರವಸೆ ನೀಡಿದ ನಟ ಉಪೇಂದ್ರ, ನಾವು ಜನ ನಾಯಕರನ್ನು ಏನು ಕೇಳಲ್ಲ. ಅವರು ಏನು ಹೇಳಲ್ಲ. ಹೀಗಾಗಿ ಎಲ್ಲರೂ ಪ್ರಶ್ನಿಸುವ ಗುಣವನ್ನ ಕಲಿಯಬೇಕು. ಇಲ್ಲಿ ಯಾರು ಮುಖ್ಯ ಅಲ್ಲ. ಮಾಡುವ ಕೆಲಸ ಮುಖ್ಯ. ಗೆದ್ದ ಮೇಲೆ ಲೀಡರ್ಸ್, ವರ್ಕರ್ಸ್ ಆಗಿರಬೇಕು. ನಮಗೆ ಯಾರು ಹೈಕಮಾಂಡ್ ಇಲ್ಲ. ಜನರೇ ನಮಗೆ ಹೈಕಮಾಂಡ್ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗೆಲ್ಲೋದು ಎರಡು ಮೂರು ಸೀಟ್ ಮಾತ್ರ ಅಮೇಲೆ ಯಾರ ಜೊತೆಯಲ್ಲೂ ಸೇರುತ್ತಾರೆ ಅಂತಾರೆ. ಆದರೆ ನಾವು ಯಾರ ಜೊತೆಲೂ ಸೇರಲ್ಲ. ಹಳ್ಳಿಗಳ ಸರ್ವತೋಮುಖ ಅಭಿವೃದ್ದಿ ನಮ್ಮ ಗುರಿ. ಎಲ್ಲರಿಗೂ ಉಚಿತ ಶಿಕ್ಷಣ. ಆರೋಗ್ಯ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ನಟ ಉಪೇಂದ್ರ ಭರವಸೆ ನೀಡಿದರು. ಅಲ್ಲದೇ ನವೆಂಬರ್ 10 ರಂದು ಪಕ್ಷದ ಲೋಗೋ ಮತ್ತು ಆ್ಯಪ್ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

Kannada News Karnataka ಉಪೇಂದ್ರ ಪ್ರಜಾಕೀಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ