ಸಿದ್ದು ವಿರುದ್ಧ ಬಿಎಸ್ ವೈ ಗುಡುಗು..

Kannada News

31-10-2017

ತುಮಕೂರು: ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ತರುವ ಮಹತ್ವಾಕಾಂಕ್ಷೆಯೊಂದಿಗೆ ನಾಳೆಯಿಂದ ಪರಿವರ್ತನಾ ರ‍್ಯಾಲಿ ನಡೆಯಲಿದೆ, ಯಾತ್ರೆ ಸಾಗುವ ಮಾರ್ಗದುದ್ದಕ್ಕೂ ರಾಜ್ಯ ಸರ್ಕಾರದ ಅಕ್ರಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಈ ಸರ್ಕಾರವನ್ನು ಕಿತ್ತೊಗೆಯುವಂತೆ ಮನವಿ ಮಾಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಸಿದ್ಧಗಂಗಾ ಮಠದಲ್ಲಿ ಶಿವಕುಮಾರ ಶ್ರೀಗಳನ್ನು ಭೇಟಿ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಳೆ ಪರಿರ್ವತನಾ ಯಾತ್ರೆಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್‍ಷಾ ಚಾಲನೆ ನೀಡಲಿದ್ದಾರೆ. ಈ ವೇಳೆ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗಿಶ್ವರ್ ಹಾಗೂ ಕುಡಚಿ ಶಾಸಕ ಬಿಜೆಪಿ ಸೇರಲಿದ್ದಾರೆ ಇದು ರಾಜ್ಯದಲ್ಲಿ ಧ್ರುವೀಕರಣ ಪ್ರಕ್ರಿಯೆಗೆ ಚಾಲನೆ ನೀಡಲಿದ್ದು ಸಧ್ಯದಲ್ಲೆ ಇನ್ನಷ್ಟು ಮಂದಿ ಬಿಜೆಪಿ ಸೇರಲಿದ್ದಾರೆ ಎಂದು ಹೇಳಿದರು.

ಧರ್ಮಸ್ಥಳಕ್ಕೆ ಹೋದಾಗ ಪ್ರಧಾನಿಗಳು ಭಯ ಭಕ್ತಿಯಿಂದ ಉಪವಾಸ ಇದ್ದರು. ಈ ಮನುಷ್ಯ ನಾನು ಮೀನು, ಕೋಳಿ ತಿಂದು ಹೋಗಿದ್ದೆ ಅಂತಾ ಭಕ್ತರಿಗೆ ಅಪಮಾನ ಮಾಡಿದ್ದಾರೆ. ದರ್ಶನಕ್ಕೂ ದೇವಸ್ಥಾನದ ಒಳಗೆ ಹೋಗದೇ ಇದ್ದಿದ್ದು ಅಕ್ಷಮ್ಯ, ನಾಡಿನ ಜನ ಈ ರೀತಿಯ ಮುಖ್ಯಮಂತ್ರಿಯನ್ನು ಪಡೆದಿದ್ದಾರಲ್ಲ ಎಂದು ನೋವಾಗುತ್ತಿದೆ, ಇಂಥ ಸಿಎಂ ಅಧಿಕಾರದಿಂದ ತೊಲಗಬೇಕು ಅದಕ್ಕೆ ಶಪಥ ಮಾಡಿದ್ದೇನೆ ಎಂದು ತಿಳಿಸಿದರು.

ಸಿಎಂ ಅವರದ್ದು ಎಲುಬಿಲ್ಲದ ನಾಲಗೆ, ಪದೇ ಪದೇ ನನ್ನ ಜೈಲಿಗೆ ಕಳುಹಿಸ್ತೀನಿ ಎನ್ನುತ್ತಾರೆ. ಯಾರು ನನ್ನ ಜೈಲಿಗೆ ಕಳುಹಿಸೋಕೆ ಪದೇ ಪದೇ, ನನ್ನ 'ಜೈಲಿಗೆ ಕಳುಹಿಸುತ್ತೇನೆ' ಎಂಬ ಹೇಳಿಕೆಗೆ ಕಡಿವಾಣ ಹಾಕುತ್ತೇನೆ, ಈ ಸಂಬಂಧ ಹೈಕೋರ್ಟ್‍ನಲ್ಲಿ ಮನವಿ ಮಾಡಲಿದ್ದೇನೆ' ಎಂದರು. 'ಸಿದ್ದರಾಮಯ್ಯ ಸೊಕ್ಕಿನಿಂದ ಮೆರೆದು, ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿದ್ದಾರೆ. ಪ್ರಧಾನಿ ಅವರಿಗೆ ನನ್ನ ಕಂಡ್ರೆ ಭಯ ಅಂತಾ ಹೇಳಿಕೆ ನೀಡಿದ್ದಾರೆ. ಇದು ಮೂರ್ಖತನದ ಪರಮಾವಧಿ' ಎಂದು ಗುಡುಗಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ