ಗಾಂಜಾ ಮಾರಾಟ: 10 ಮಂದಿ ಬಂಧನ !

Kannada News

31-10-2017 462

ಮಂಗಳೂರು: ಮಂಗಳೂರು ನಗರ ಬಿಜೈ ಪರಿಸರದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತಿದ್ದವರನ್ನು ಬಂಧಿಸುವಲ್ಲಿ ಮಂಗಳೂರು ದಕ್ಷಿಣ ರೌಡಿ ನಿಗ್ರಹ ದಳದ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಂಗಳೂರು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹ ದಳದ ಮತ್ತು ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಿಗೆ, ಮಂಗಳೂರು ನಗರದ ಬಿಜೈ ರಾಮ ಮಂದಿರದ ಬಳಿಯಲ್ಲಿರುವ, ತಿರುಮೇಲೇಶ್ ಎಂಬುವರ ಮನೆಯಲ್ಲಿ ರೋಶನ್ ಎಂಬವರು ಗಾಂಜಾವನ್ನು ತಂದು, ಪ್ಯಾಕೇಟ್ ಮಾಡಿ, ಗಿರಾಕಿಗಳಿಗೆ ಮಾರಾಟ ಮಾಡುತ್ತಿರುವ ಮತ್ತು ಕೆಲವೊಂದು ಗಿರಾಕಿಗಳ ಮೂಲಕ ಬೇರೆ ಗಿರಾಕಿಗಳಿಗೆ ಮಾರಾಟ ಮಾಡಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು.

ಈ ಕುರಿತಂತೆ ಗಿರಾಕಿಗಳು ಅವರ ಮನೆಗೆ ಬಂದು ಗಾಂಜಾವನ್ನು ತೆಗೆದುಕೊಂಡು ಹೋಗುತ್ತಾರೆ ಎಂಬುದಾಗಿ ಖಚಿತ ಮಾಹಿತಿ ಮೇರೆಗೆ ಮನೆಗೆ ದಾಳಿ ಮಾಡಿದ ಪೊಲೀಸರು ರೋಶನ್ ವೇಗಸ್(23) ಇವರ ತಂದೆ ಸಿಪ್ರಿಯನ್ ವೇಗಸ್, ವಾಸ, ಅನಿಲ್ ಡಿ ಸೋಜ(45) ಇವರ ತಂದೆ ದಿ ಜೋಕಿಂ ಡಿಸೋಜ, ರೈಮಂಡ್ ಮೊಂತೆರೋ, ರಕ್ಷಿತ್ ಶೆಟ್ಟಿ (21) ಇವರ ತಂದೆ ಪ್ರಭಾಕರ ಶೆಟ್ಟಿ, ಯಜ್ಞೇಶ ಶೆಟ್ಟಿ(21) ಇವರ ತಂದೆ ಲೋಕನಾಥ ಶೆಟ್ಟಿ ಬಂಧಿತ ಆರೋಪಿಗಳು.

ಸದರಿ ಮನೆಯಲ್ಲಿ ಮಾರಾಟಕ್ಕೆ ಇಟ್ಟಿದ್ದ 61 ಗಾಂಜಾ ಪ್ಯಾಕೇಟುಗಳು ಮತ್ತು ಬಿಡಿ(ಲೂಸ್) ಸೇರಿ ಒಟ್ಟು 2.200 ಕಿ.ಗ್ರಾಂ ಗಾಂಜಾ, 5 ಮೊಬೈಲ್ ಫೋನ್ ಮತ್ತು ರೂ.2390 ನಗದನ್ನು ಪೊಲೀಸರು ವಶಪಡಿಸಿಕಂಡಿದ್ದಾರೆ. ಆರೋಪಿಗಳು ಸುಮಾರು ಎರಡು ವರ್ಷದಿಂದ ತೀರ್ಥಹಳ್ಳಿಯಿಂದ ಗಾಂಜಾವನ್ನು ತಂದು, ಪ್ಯಾಕೇಟ್ ಮಾಡಿ, ಅದನ್ನು ಮಾರಾಟ ಮಾಡುತ್ತಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಮತ್ತು ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.ಸಂಬಂಧಿತ ಟ್ಯಾಗ್ಗಳು

Kannada News Karnataka ರೌಡಿ ನಿಗ್ರಹ ದಳ ಗಾಂಜಾ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ