ಮೊಬೈಲ್-ಆಧಾರ್ ಲಿಂಕ್ ಕಡ್ಡಾಯವೇಕೆ..?

Kannada News

30-10-2017

ಎಲ್ಲಾ ಮೊಬೈಲ್ ಫೋನ್ ನಂಬರ್‌ ಗಳನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಅದರಂತೆ, ಬಿಎಸ್‌ಎನ್‌ಎಲ್, ಏರ್‌ಟೆಲ್, ಜಿಯೋ ಇತ್ಯಾದಿ ದೂರಸಂಪರ್ಕ ಕಂಪನಿಗಳು ತಮ್ಮ ಗ್ರಾಹಕರಿಗೆ ಈಗಾಗಲೇ ಸಂದೇಶಗಳನ್ನು ಕಳಿಸುತ್ತಿವೆ.

ಈ ನಡುವೆ, ಮೊಬೈಲ್ ಫೋನ್ ಸಂಖ್ಯೆಗೆ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಇಡೀ ದೇಶದ ಜನ ತಮ್ಮ ಮೊಬೈಲ್ ಫೋನ್ ನಂಬರ್ ಅನ್ನು, ಆಧಾರ್ ನಂಬರ್‌ ನೊಂದಿಗೆ ಲಿಂಕ್ ಮಾಡಬೇಕಾದ ಅವಶ್ಯಕತೆ ಏನು..? ಎಂದು ಕೇಂದ್ರ ಸರ್ಕಾರವನ್ನು ಕೇಳಿ, ನೋಟಿಸ್ ಜಾರಿ ಮಾಡಿದೆ. ಈ ಬಗ್ಗೆ 4 ವಾರಗಳ ಒಳಗೆ ತನ್ನ ಜವಾಬು ನೀಡುವಂತೆ ಸೂಚಿಸಿದೆ.

 


ಸಂಬಂಧಿತ ಟ್ಯಾಗ್ಗಳು

Kannada News Karnataka ಮೊಬೈಲ್ ಫೋನ್ ಆಧಾರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ