ಹುಬ್ಬಳ್ಳಿ ಆರೋಗ್ಯ ಉತ್ಸವಕ್ಕೆ ಕ್ಷಣಗಣನೆ….

Kannada News

30-10-2017

ಹುಬ್ಬಳ್ಳಿ ನಗರದಲ್ಲಿ ಮೊದಲ ಬಾರಿಗೆ ಅತ್ಯಂತ ದೊಡ್ಡ ಮಟ್ಟದ ಆರೋಗ್ಯ ಉತ್ಸವವನ್ನು ಇದೇ ನವೆಂಬರ್ ತಿಂಗಳಲ್ಲಿ ಆಯೋಜಿಸಲಾಗುತ್ತಿದೆ. ಈಗಾಗಲೇ ಕಳೆದ ಮೇ ತಿಂಗಳಲ್ಲಿ ಬೆಂಗಳೂರು ಹೆಲ್ತ್‌ ಫೆಸ್ಟಿವಲ್ ಅನ್ನು ಅತ್ಯಂತ ದೊಡ್ಡರೀತಿಯಲ್ಲಿ ಯಶಸ್ವಿಯಾಗಿ ಆಯೋಜಿಸಿದ್ದ ಟಿವಿ ಹೌಸ್ ನೆಟ್‌ವರ್ಕ್ ಸಂಸ್ಥೆ, ಇದೀಗ ಹುಬ್ಬಳ್ಳಿ ಆರೋಗ್ಯ ಉತ್ಸವ ಆಯೋಜಿಸುತ್ತಿದೆ. ಹುಬ್ಬಳ್ಳಿಯ ಇಂದಿರಾ ಗ್ಲಾಸ್ ಹೌಸ್‌ ನಲ್ಲಿ ಇದೇ ನವೆಂಬರ್ 24ರಿಂದ 26ರ ವರೆಗೆ ಮೂರು ದಿನಗಳ ಕಾಲ ಹುಬ್ಬಳ್ಳಿ ಹೆಲ್ತ್ ಫೆಸ್ಟಿವಲ್  ನಡೆಯಲಿದೆ.

ಹುಬ್ಬಳ್ಳಿ ಆರೋಗ್ಯ ಉತ್ಸವದಲ್ಲಿ ಔಷಧ ತಯಾರಿಕಾ ಕಂಪನಿಗಳು, ಆಸ್ಪತ್ರೆಗಳು, ವೈದ್ಯಕೀಯ ಶಿಕ್ಷಣ ಸಂಸ್ಥೆಗಳು, ವಿವಿಧ ರೀತಿಯ ಆರೋಗ್ಯ ಸೇವೆ ಒದಗಿಸುವ ಸಂಸ್ಥೆಗಳು ಪಾಲ್ಗೊಳ್ಳಲಿವೆ.

ಸಾರ್ವಜನಿಕರಿಗೆ ಉಚಿತ ಪ್ರವೇಶವಿರುವ ಹುಬ್ಬಳ್ಳಿ ಹೆಲ್ತ್‌ ಫೆಸ್ಟಿವಲ್‌ ನಲ್ಲಿ ಉಚಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬಹುದು, ಆಸ್ಪತ್ರೆಗಳು ಮತ್ತು ಅಲ್ಲಿನ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯಬಹುದು. ಇದರ ಜೊತೆಗೆ, ಪ್ರತಿದಿನವೂ ಆರೋಗ್ಯಕ್ಕೆ ಸಂಬಂಧಿಸಿದ ಗೋಷ್ಠಿಗಳು, ಚರ್ಚೆ, ವಿಚಾರ ಸಂಕಿರಣಗಳು ಮತ್ತು ನಗೆ ನಾಟಕಗಳು ಹಾಗೂ ಆರೋಗ್ಯ ರಸಪ್ರಶ್ನಾ ಕಾರ್ಯಕ್ರಮಗಳೂ ಇರುತ್ತವೆ.

ಕುಟುಂಬದ ಎಲ್ಲಾ ಸದಸ್ಯರೂ ಪಾಲ್ಗೊಳ್ಳಬಹುದಾದ ಈ ಹುಬ್ಬಳ್ಳಿ ಆರೋಗ್ಯ ಉತ್ಸವದಲ್ಲಿ ಸಾಕ್ಷ್ಯ ಚಿತ್ರಗಳು ಮತ್ತು ಮನರಂಜನಾ ಕಾರ್ಯಕ್ರಮಗಳು ಕೂಡ ಇರುತ್ತವೆ. 

ಹೆಸರಾಂತ ಪತ್ರಕರ್ತ, ಮಾಧ್ಯಮ ತಜ್ಞ ದೀಪಕ್ ತಿಮ್ಮಯ ನಿರ್ದೇಶನದಲ್ಲಿ ನಡೆಯಲಿರುವ ಹುಬ್ಬಳ್ಳಿ ಆರೋಗ್ಯ ಉತ್ಸವ, ಆಸ್ಪತ್ರೆಗಳಿಗೆ, ಔಷಧ ತಯಾರಿಕಾ ಕಂಪನಿಗಳಿಗೆ, ಸೌಂದರ್ಯ ವರ್ಧಕಗಳು ಮತ್ತು ಫಿಟ್‌ ನೆಸ್ ಉಪಕರಣಗಳ ತಯಾರಕರು ತಮ್ಮ ಸೇವೆ ಮತ್ತು ಉತ್ಪನ್ನಗಳ ಬಗ್ಗೆ  ಜನರಿಗೆ ಮಾಹಿತಿ ನೀಡಲು ಅತ್ಯುತ್ತಮ ವೇದಿಕೆ ಒದಗಿಸಿಕೊಡುತ್ತದೆ. ಹುಬ್ಬಳ್ಳಿ ಆರೋಗ್ಯ ಉತ್ಸವದಲ್ಲಿ ಪಾಲ್ಗೊಳ್ಳಲು ಬಯಸುವ ಆರೋಗ್ಯ ಕ್ಷೇತ್ರದ ಸಂಸ್ಥೆಗಳು ಸಂಪರ್ಕಿಸಬಹುದಾದ ಫೋನ್ ಸಂಖ್ಯೆ:9886464641, ಇ-ಮೇಲ್ ವಿಳಾಸ hhf@tvhousenetwork.com


ಸಂಬಂಧಿತ ಟ್ಯಾಗ್ಗಳು

Kannada News Karnataka ಹುಬ್ಬಳ್ಳಿ ಆರೋಗ್ಯ ಉತ್ಸವ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ