ವ್ಯಕ್ತಿ ಅಪಹರಣಕ್ಕೆ ಸಂಚು: 6 ಮಂದಿ ಬಂಧನ !

Kannada News

30-10-2017

ಉಡುಪಿ: ವ್ಯಕ್ತಿಯೊಬ್ಬನ ಜೊತೆ ಉಡುಪಿ ನಗರದಲ್ಲಿ ಗಲಾಟೆ ಮಾಡಿ ಆತನನ್ನು ಅಪಹರಿಸಲು ಸಂಚು ರೂಪಿಸಿದ ಆರು ಮಂದಿ ಆರೋಪಿಗಳನ್ನು ಉಡುಪಿಯ ಕಾಪು ಪೊಲೀಸರು ಬಂಧಿಸಿದ್ದಾರೆ.

ದೀಪಕ್(19), ದೀಕ್ಷಿತ್ (20), ಸುಮಂತ್ (20), ಉಜ್ವಲ್ (20), ಸತ್ಯರಾಜ್ (23), ನಿತೇಶ್ (28) ಬಂಧಿತ ಆರೋಪಿಗಳು. ನಗರದಲ್ಲಿ ಶಿವ ಪ್ರಸಾದ್ ಮತ್ತು ಮಂಜುನಾಥ್ ಎಂಬವರ ಜೊತೆ ಗಲಾಟೆ ಮಾಡಿದ ಇವರು, ಸೇಡು ತೀರಿಸಿಕೊಳ್ಳಲು ಅವರ ಅಪಹರಣಕ್ಕೆ ಯತ್ನಿಸಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ, ಅಪಹರಣಕ್ಕೆ ಸಂಚು ರೂಪಿಸಿದ್ದವರ ಹುಡುಕಾಟ ಆರಂಭಿಸಿದ ಪೊಲೀಸರು, ಆರೋಪಿಗಳ ಬಂಧನಕ್ಕೆ ಸಾರ್ವಜನಿಕರ ಸಹಾಯವನ್ನು ಕೋರಿದ್ದರು. ಇವರನ್ನು ಹಿಡಿದುಕೊಟ್ಟ ಆರೋಪಿಗಳಿಗೆ 5 ಸಾವಿರ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಇನ್ನು ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ