'ನಾನು-ಸಿಂಧ್ಯ ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡ್ತೇವೆ’

Kannada News

30-10-2017

ಬೆಂಗಳೂರು: ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿಸಿದ್ದು, ಕಳೆದ ಆರು ತಿಂಗಳ ಹಿಂದೆಯೇ ಹೊಸ ಕಚೇರಿಯ ಪ್ರವೇಶದ ವಿಶೇಷ ಪೂಜೆ ನಡೆದಿತ್ತು. ಆಗ ಇನ್ನೂ ಕಟ್ಟಡದ ಕೆಲಸ ಬಾಕಿ ಇದ್ದು, ಇದೀಗ ಕಟ್ಟಡ ಸಂಪೂರ್ಣಗೊಂಡ ಹಿನ್ನಲೆಯಲ್ಲಿ ಮತ್ತೊಮ್ಮೆ ನಡೆದ ಪೂಜಾ ಕಾರ್ಯಕ್ರಮವು, ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ಗೌರವಿಸುವ ಸಲುವಾಗಿ ನಡೆದ ಸಮಾರಂಭ ಎನ್ನಲಾಗಿದೆ.

ಬೆಳಿಗ್ಗೆಯಿಂದ ನಡೆದ ಗಣಪತಿ ಹೋಮ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷದ ವರಿಷ್ಠ ಮತ್ತು ರಾಷ್ಟ್ರೀಯ ಅಧ್ಯಕ್ಷ  ಹೆಚ್.ಡಿ.ದೇವೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಭಾಗಿಯಾಗಿದ್ದರು.

ಪೂಜೆಯ ನಂತರ ಪಕ್ಷದ ವಿವಿಧ ವಿಭಾಗಗಳಿಗೆ ಕೊಠಡಿ ಹಂಚಿಕೆ ಮಾಡಿ ಮಾತನಾಡಿದ ಹೆಚ್.ಡಿ ದೇವೇಗೌಡರು, ಸಿಂಧ್ಯ ಮತ್ತು ನನ್ನ ಸ್ನೇಹ 1975ರಲ್ಲಿ ಆರಂಭವಾದದ್ದು, ಆವತ್ತು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾಗಾಂಧಿಯವರು ನಮ್ಮನ್ನ ಜೈಲಿಗೆ ಹಾಕಿದ್ರು ಎಂದು ನೆನಪು ಮಾಡಿಕೊಂಡರು.  ಕಳೆದ ಹತ್ತಾರು ದಿನಗಳಿಂದ ಸಿಂಧ್ಯ ಅವರಲ್ಲಿ ಮನವಿ ಮಾಡಿದ್ದೆ, ಪಕ್ಷದಲ್ಲಿ ಸಕ್ರೀಯರಾಗಿ ಎಂದು ಹೇಳಿದ್ದೆ,  ಆದರೆ ಇಂದು ಕಾಲ ಕೂಡಿ ಬಂದಿದೆ ಎಂದರು.

ಅಷ್ಟೇ ಅಲ್ಲದೇ ಜೆಪಿ ಭವನದ ಕಟ್ಟಡದಲ್ಲಿ ಎಲ್ಲ ವಿಭಾಗಕ್ಕು ಕೊಠಡಿ ಮೀಸಲಿಡಲಾಗಿದೆ. ಕಚೇರಿಯಲ್ಲಿ ಶಿಸ್ತು ಬದ್ಧವಾಗಿ ಕೆಲಸ ನಡೆಯಬೇಕು ಎಂದರು. ಇನ್ನು ವಿಧಾನಸಭಾ ಚುನಾವಣೆ ಬಳಿಕ ಸಿಂಧ್ಯ ಮತ್ತು ನಾನು ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡ್ತೇವೆ ಎಂದು ತಿಳಿಸಿದರು. ಈ ರಾಜ್ಯದಲ್ಲಿ ಮೊದಲು‌ ಜೆಡಿಎಸ್ ಅಧಿಕಾರಕ್ಕೆ ಬರಬೇಕು ಎನ್ನುವುದು ನನ್ನ ಆಸೆ. ಇದಕ್ಕೆ ಸಿಂಧ್ಯಾ, ಕುಮಾರಸ್ವಾಮಿ, ಹೊರಟ್ಟಿ ಸೇರಿದಂತೆ‌ ಸಾಕಷ್ಟು ಮುಖಂಡರು ಇದ್ದಾರೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ