ನಕಲಿ ಮಂಗಳ ಮುಖಿಗೆ ಬಿತ್ತು ಗೂಸ !

Kannada News

30-10-2017

ದಾವಣಗೆರೆ: ನಕಲಿ ಮಂಗಳ ಮುಖಿಗೆ, ಅಸಲಿ ಮಂಗಳ ಮುಖಿಯರು ಧರ್ಮದೇಟು ನೀಡಿರುವ ಘಟನೆಯು, ದಾವಣಗೆರೆಯಲ್ಲಿ ನಡೆದಿದೆ. ದಾವಣಗೆರೆ ನಗರದ ಗಡಿಯಾರ ಕಂಬದ ಬಳಿ, ರಾಜಶೇಖರ್ ಆಲಿಯಾಸ್ ಕಾವ್ಯ ಎಂಬುವರು ಮಂಗಳ ಮುಖಿ ವೇಷದಲ್ಲಿ ಸಾರ್ವಜನಿಕರನ್ನು ಬೆದರಿಸಿ ಬಿಕ್ಷೆ ಬೇಡುತ್ತಿದ್ದರು.

ಇನ್ನು ಇದೇ ವೇಳೆಗೆ ಅಲ್ಲಿಗೆ ಬಂದ ಅಸಲಿ ಮಂಗಳ ಮುಖಿಯರಾದ ಆಲಿಯಾ ಮತ್ತು ಜೋಯಾ, ರಾಜಶೇಖರನನ್ನು ಗಮನಿಸಿದ್ದು, ಆತ ಅಲ್ಲಿನ ಸ್ಥಳಿಯರಿಗೆ ಬೆದರಿಸಿ ಹಣ ಕೀಳುತ್ತಿರುವುದು ಕಂಡು ಬಂದಿದ್ದು, ಸ್ಥಳದಲ್ಲಿಯೇ ಆತನನ್ನು ಹಿಡಿದು ಥಳಿಸಿ ಬಸವನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ರಾಜಶೇಖರ್ ಆಲಿಯಾಸ್ ಕಾವ್ಯರನ್ನು ವಶಕ್ಕೆ ಪಡೆದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ಮಂಗಳ ಮುಖಿ ಸಾರ್ವಜನಿಕರು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ