ನಟಿಯನ್ನು ಪೀಡಿಸುತ್ತಿದ್ದ ಯುವಕ ಅರೆಸ್ಟ್ !

Kannada News

30-10-2017 313

ಬೆಂಗಳೂರು: ಉದಯೋನ್ಮುಖ ಮಲೆಯಾಳಂ ನಟಿ ರೆಬೋ ಮೋನಿಕಾ ಜಾನ್‍ ಳನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಯುವಕನೊಬ್ಬನನ್ನು ಮಡಿವಾಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿಯ ಫ್ರಾಂಕ್ಲಿನ್ ಬಂಧಿತ ಆರೋಪಿಯಾಗಿದ್ದಾನೆ. ಪ್ರತಿ ಭಾನುವಾರ ಚರ್ಚ್‍ಗೆ ಬರುತ್ತಿದ್ದ ಮೋನಿಕಾಳನ್ನು ಪರಿಚಯ ಮಾಡಿಕೊಂಡಿದ್ದ ಆರೋಪಿ ಫ್ರಾಂಕ್ಲಿನ್, ಬಳಿಕ ಪ್ರೀತಿಸುವಂತೆ, ಮದುವೆಯಾಗುವಂತೆ ಪೀಡಿಸುತ್ತಿದ್ದನು ಎಂದು ತಿಳಿದು ಬಂದಿದೆ. ಆದರೆ ಇದನ್ನು ನಿರಾಕರಿಸಿ ಯುವಕನಿಗೆ ಎಚ್ಚರಿಕೆಯನ್ನು ನೀಡಿದ್ದಳು. ಆದರೂ ಆರೋಪಿ ನಟಿಯ ಫೋನ್ ನಂಬರ್ ತಿಳಿದುಕೊಂಡು ಆಕೆಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದನು. ನಾನು ನಿನ್ನನ್ನು ಪ್ರೀತಿಸುತ್ತೇನೆ, ನೀನು ನನ್ನನ್ನು ಮದುವೆಯಾಗಬೇಕು ಎಂದು ಮೆಸೇಜ್ ಮಾಡುತ್ತಿದ್ದನು. ನಟಿಯ ಫೋನ್ ನಂಬರ್ ಮಾತ್ರವಲ್ಲದೆ ಆಕೆಯ ಕುಟುಂಬದ ಮಾಹಿತಿ, ಫೋನ್ ನಂಬರ್ ಗಳನ್ನು ಸಹ ಪಡೆದುಕೊಂಡಿದ್ದನು.

ನಟಿಯ ಮಾತನ್ನು ಕೇಳದೆ ಮದುವೆಯಾಗುವಂತೆ ಪೀಡಿಸುತ್ತಿದ್ದರಿಂದ ಬೇಸತ್ತ ಮೋನಿಕಾ, ಮಡಿವಾಳ ಪೊಲೀಸರಿಗೆ ದೂರು ನೀಡಿದ್ದರು. ನಟಿ ಕೊಟ್ಟ ದೂರು ಆಧರಿಸಿ 28 ವರ್ಷದ ಫ್ರಾಂಕ್ಲಿನ್ ವಿಸಿಲ್‍ ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಫ್ರಾಂಕ್ಲಿನ್, ಬಸವನಗುಡಿಯ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗಿದೆ. ಮೋನಿಕಾ 'ಜೇಕಬ್ ಇಂಟೇ ಸ್ವರ್ಗರಾಜ್ಯಂ' ಎಂಬ ಮಲೆಯಾಳಂ ಚಿತ್ರದಲ್ಲಿ ನಟಿಸಿದ್ದು, ಹಲವು ಚಿತ್ರಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ