‘ಚಾಮುಂಡಿ ಕ್ಷೇತ್ರದಲ್ಲಿ ವಿಪಕ್ಷಗಳಿಗೆ ಭಯ’-ಸಿದ್ದು

Kannada News

30-10-2017

ಮೈಸೂರು: ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವುದೇ ನಮ್ಮ ವಿಷನ್. ಬಿಜೆಪಿ ಅವರ ಹಾಗೆ 150 ಮಿಷನ್ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಮೈಸೂರಿನಲ್ಲಿಂದು ಮಾತನಾಡಿದ ಅವರು, ಬಿಜೆಪಿಯವರದು ಮಿಷನ್, ಕಾಂಗ್ರೆಸ್ ನದ್ದು ಅಧಿಕಾರಕ್ಕೆ ಬರುವ ವಿಷನ್ ಎಂದರು.

ಬಿಜೆಪಿಯವರ ಮಿಷನ್ 150 ಇದೀಗ 50ಕ್ಕೆ ಇಳಿದಿದೆ. ಚುನಾವಣೆ ವೇಳೆಗೆ ಈ ಸಂಖ್ಯೆ ಎಷ್ಟಕ್ಕೆ ಇಳಿಯಲಿದೆಯೋ ಎಂದು ವ್ಯಂಗ್ಯವಾಡಿದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ವಿಪಕ್ಷಗಳಿಗೆ ಭಯ ಶುರುವಾಗಿದೆ, ಹಾಗಾಗಿ ನನ್ನನ್ನು ಸೋಲಿಸಲಿಕ್ಕೆ ಎಲ್ಲರೂ ಒಂದಾಗುತ್ತಿದ್ದಾರೆ, ಆದರೆ ನಾನು ಅದಕ್ಕೆ ಅಂಜುವುದಿಲ್ಲ ಎಂದರು. ವರುಣಾ ಕ್ಷೇತ್ರದಲ್ಲಿ ಜೆಡಿಎಸ್‍ನಿಂದ ಪಿ.ಜಿ.ಆರ್. ಸಿಂಧ್ಯ ಅವರನ್ನು ಕಣಕ್ಕಿಳಿಸಲಾಗುತ್ತದೆಂದು ತಿಳಿದುಬಂದಿದೆ. ಆದರೆ ಸಿಂಧ್ಯಾ ಅವರು ಇಲ್ಲಿ ನಿಂತು ಏನೂ ಮಾಡಲಿಕ್ಕಾಗಲ್ಲ, ಅವರು ರಾಮನಗರದಲ್ಲಿ ನಿಲ್ಲೋದು ಒಳ್ಳೆಯದು ಎಂದು ಚಾಟಿ ಬೀಸಿದರು.

ಯಡಿಯೂರಪ್ಪ ಅವರು ಇಲ್ಲಿ ನಿಂತು ಮಾತನಾಡುವ ಬದಲು ಕೇಂದ್ರದಿಂದ ಕೃಷಿ ಸಾಲ ತರಲಿ ಎಂದು ಹೇಳಿದರು. ಬಿಜೆಪಿಯ ರಾಜಕಾರಣಿಗಳು ಕೊಳಕು ಮನಸ್ಥಿತಿ ಉಳ್ಳವರು, ಅವರಿಗೆ ರಾಜ್ಯದ ಕಾಂಗ್ರೆಸ್ ಆಡಳಿತವನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಹಾಗಾಗಿ ನಮ್ಮ ಪಕ್ಷದ ಮೇಲೆ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು. ಅಲ್ಲದೇ  ನಂಜನಗೂಡಿನಲ್ಲಿ ಕಾಂಗ್ರೆಸ್‍ ನನ್ನು ಜನರು ಗೆಲ್ಲಿಸಿದರು, ಜನ ಬಯಸಿದರೆ ಮತ್ತೆ ಸಿದ್ದರಾಮ್ಯ ನೇತೃತ್ವದ ಸರ್ಕಾರ ಬೇಕು ಎನ್ನುತ್ತಾರೆ ಎಂದರು.


ಸಂಬಂಧಿತ ಟ್ಯಾಗ್ಗಳು

Kannada News Karnataka ಮಿಷನ್ 150 ಕೃಷಿ ಸಾಲ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ