ರಾಜ್ಯ ಡಿಜಿಪಿ ಹುದ್ದೆಗೆ ಕನ್ನಡಿಗರು..!

Kannada News

30-10-2017

ಬೆಂಗಳೂರು: ರಾಜ್ಯದ ನೂತನ ಪೊಲೀಸ್​ ಮಹಾ ನಿರ್ದೇಶಕ ಸ್ಥಾನಕ್ಕೆ  ಹಿರಿಯ ಪೊಲೀಸ್ ಅಧಿಕಾರಿ ಕಿಶೋರ್ ಚಂದ್ರ ಅವರನ್ನು ನೇಮಿಸಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.

ನೇಮಕ ಸಂಬಂಧ ತಮ್ಮ ಸಂಪುಟದ ಹಿರಿಯ ಸಚಿವರು ಮತ್ತು ನಾಯಕರ ಒತ್ತಡಕ್ಕೆ ಮಣಿದ ಸಿಎಂ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ. ಸರಕಾರ ನೇಮಿಸಲಿರುವ ಹೊಸ ಐಪಿಎಸ್ ಅಧಿಕಾರಿ ಅವರು ಅಪ್ಪಟ ಕನ್ನಡಿಗರು ಎಂಬುದು ಗಮನಾರ್ಹ. ಈ ಆದೇಶದಿಂದ ಶಂಕರ್​ ಬಿದರಿಯ ನಂತರ ಮತ್ತೊಬ್ಬ ಕನ್ನಡಿಗ ಪೊಲೀಸ್​ ಮಹಾ ನಿರ್ದೇಶಕ ಹುದ್ದೆ ಅಲಂಕರಿಸುವಂತಾಗಿದೆ.

ಮೈಸೂರಿನ ಹೆಚ್.ಸಿ.ಕಿಶೋರ್​ ಚಂದ್ರ ಅವರು,1984 ಬ್ಯಾಚ್​ ನ ಐಪಿಎಸ್​ ಅಧಿಕಾರಿ. ಎಂಎ, ಸ್ನಾತಕೋತ್ತರ, ಕಾನೂನು ಡಿಪ್ಲೊಮಾ ವ್ಯಾಸಂಗ ಮಾಡಿದ್ದಾರೆ. ಸದ್ಯ ಡಿಜಿಪಿ ಹಾಗೂ ಐಜಿ ಯಾಗಿರುವ ಆರ್​.ಕೆ. ದತ್ತಾ ಅವರ ಅಧಿಕಾರ ಅಕ್ಟೋಬರ್​ 31ರಂದು ಅಂತ್ಯಗೊಳ್ಳಲಿದೆ.

ಡಿಜಿಪಿ ರೇಸ್​ನಲ್ಲಿ ಕಿಶೋರ್ ಚಂದ್ರ, ಎಂ.ಎನ್​.ರೆಡ್ಡಿ, ಮತ್ತು ನೀಲಮಣಿ ರಾಜು ಇದ್ದರೂ. ಸಂಪುಟ ಸಭೆಯಲ್ಲಿ ಕೂಡ ಡಿಜಿಪಿ ಆಯ್ಕೆ ಕುರಿತು ಚರ್ಚೆ ನಡೆದಿದೆ. ಆ ಸಮಯದಲ್ಲಿ ಸಚಿವರಾದ ಡಿ.ಕೆ.ಶಿವಕುಮಾರ, ಟಿ.ಬಿ ಜಯಚಂದ್ರ ಸೇರಿದಂತೆ ಎಲ್ಲ ಒಕ್ಕಲಿಗ ಸಚಿವರು ಹೆಚ್.ಸಿ.ಕಿಶೋರ್​ ಚಂದ್ರ ಅವರನ್ನು ನೇಮಕ ಮಾಡಲು ಬೆಂಬಲ ಸೂಚಿಸಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ