'ನವೆಂಬರ್ 1ಕ್ಕೆ ಹೊಸ ಪಕ್ಷ': ಅನುಪಮಾ ಶೆಣೈ

Kannada News

30-10-2017

ಬಳ್ಳಾರಿ: ನಾನು, ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು, ಜೊತೆಗೆ ನಮ್ಮ ಪಕ್ಷದಿಂದ 80ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆ ನಡೆದಿದೆ ಎಂದು ಕೂಡ್ಲಿಗಿ ಮಾಜಿ ಡಿವೈಎಸ್ಪಿ ಅನುಪಮ ಶೆಣೈ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿದ ಅವರು, ನವೆಂಬರ್ 1ರಂದು ಪಕ್ಷದ ಹೆಸರು ಮತ್ತು ಧ್ಯೇಯೋದ್ದೇಶಗಳನ್ನು ಪ್ರಕಟಿಸಲಿದೆ, ಪಕ್ಷವನ್ನು ಬೆಂಬಲಿಸಲು ಅನೇಕರು ಮುಂದೆ ಬಂದಿದ್ದಾರೆ. ನನ್ನಲ್ಲಿ  ಹಣ ಇಲ್ಲ, ಆದರೆ ಸಹಾಯ ಮಾಡುವ ಜನರಿದ್ದಾರೆ ಎಂದರು.

ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಬಹುದು ಆದರೆ 80 ಕ್ಷೇತ್ರಗಳಲ್ಲಿ ಹೆಚ್ವಿಗೆ ಒತ್ತು ನೀಡಲಿದೆ ಎಂದರು. ನಮ್ಮ ಪಕ್ಷದಲ್ಲಿ ಜನಪರ ಆಡಳಿತ ಮತ್ತು ಜನಹಿತ ಕಾನೂನಿಗೆ ಒತ್ತು ಇರಲಿದೆ ಎಂದ ಅವರು, ಯಾರು ಭಷ್ಟರಲ್ಲ ಎಂದು ಹುಡುಕುವುದು ಕಷ್ಟ. ಬೇರೆ ಪಕ್ಷಗಳಲ್ಲಿ ಇದ್ದವರು ನಮ್ಮ ಪಕ್ಷಕ್ಕೆ ಬಂದರೂ, ಅವರು ಭ್ರಷ್ಟಾಚಾರ ಮಾಡಿದರೆ ರಕ್ಷಣೆ ಮಾಡಲ್ಲ ಎಂಬ ಭರವಸೆ ನೀಡುವೆ ಎಂದರು. ಪ್ರಾದೇಶಿಕ ಪಕ್ಷಗಳ ಹುಟ್ಟು ಸಾವುಗಳ ಬಗ್ಗೆ ಗಮನ ಸೆಳೆದಾಗ ನಾನು ಒಂದು ಪ್ರಯತ್ನ ಮಾಡುವೆ ಎಂದು ಹೇಳಿದರು.

 


ಸಂಬಂಧಿತ ಟ್ಯಾಗ್ಗಳು

Kannada News Karnataka ಚುನಾವಣೆ ಅನುಪಮ ಶೆಣೈ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ